ಕುಂಬ್ರ: ಶಂಕಿತ ಹುಚ್ಚು ನಾಯಿಯನ್ನು ಹೊಡೆದು ಸಾಯಿಸಿದ ಸಾರ್ವಜನಿಕರು
ಪುತ್ತೂರು: ಕುಂಬ್ರ ಪರಿಸರದಲ್ಲಿ ಮೂವರಿಗೆ ಕಚ್ಚಿ ಗಾಯಗೊಳಿಸಿದ್ದ ಶಂಕಿತ ಹುಚ್ಚು ನಾಯಿಯನ್ನು ಸಾರ್ವಜನಿಕರು ಸೇರಿ ಹೊಡೆದು ಸಾಯಿಸಿದ ಘಟನೆ ಜ.18ರಂದು ಕುಂಬ್ರದಲ್ಲಿ ನಡೆದಿದೆ.
ಕುಂಬ್ರ ಸಮೀಪದ ಇದ್ಪಾಡಿಯ ಅಬೂಬಕ್ಕರ್ ಹಾಗೂ ಗಟ್ಟಮನೆ ಸಮೀಪದ ಫಾತಿಮಾರವರಿಗೆ ಬೆಳಿಗ್ಗೆ ನಾಯಿ ಕಚ್ಚಿತ್ತು. ಮದ್ಯಾಹ್ನದ ವೇಳೆಗೆ ಕುಂಬ್ರದ ಕೃಷ್ಣಪ್ಪ ಎಂಬವರಿಗೆ ಅದೇ ನಾಯಿ ಕಚ್ಚಿ ಗಾಯಗೊಳಿಸಿತ್ತು. ಮೂವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು.
ನಾಯಿಯೊಂದು ಜನರಿಗೆ ಕಚ್ಚುತ್ತಿರುವ ಬಗ್ಗೆ ಆತಂಕಗೊಂಡ ಕುಂಬ್ರ ಪರಿಸರದ ಯುವಕರು ಸೇರಿಕೊಂಡು ಕುಂಬ್ರದಲ್ಲಿ ಶಂಕಿತ ಹುಚ್ಚು ನಾಯಿಯನ್ನು ಹುಡುಕಿ ಹೊಡೆದು ಕೊಂದು ಹಾಕಿದ್ದಾರೆ ಎಂದು ತಿಳಿದು ಬಂದಿದೆ.