ಕರಾವಳಿ

ಪವಿತ್ರ ಉಮ್ರಾ ಯಾತ್ರೆಯಲ್ಲಿದ್ದ ಸುಳ್ಯ ಮೂಲದ ಅಬ್ದುಲ್ಲಾರವರು ಮದೀನಾದಲ್ಲಿ ನಿಧನ


ಸುಳ್ಯ ಮಂಡೆಕೋಲು ಗ್ರಾಮದ ತೋಟಪ್ಪಾಡಿ ಅಬ್ದುಲ್ಲಾ ಎಂಬವರು ಉಮ್ರಾ ಯಾತ್ರೆಯಲ್ಲಿರುವಾಗ ಸೌದಿ ಅರೇಬಿಯಾದ ಮದಿನಾದಲ್ಲಿ ನಿಧನರಾಗಿದ್ದಾರೆ.
ಅವರಿಗೆ 67 ವರ್ಷ ವಯಸ್ಸಾಗಿತ್ತು.



ಫೆ.1ರಂದು ಅವರ ಪತ್ನಿ ಖತೀಜ ರವರೊಂದಿಗೆ ಮರ್ಕಝ್ ಉಮ್ರಾ‌ ಗ್ರೂಪ್ ಮೂಲಕ ಪವಿತ್ರ ಉಮ್ರಾ ಯಾತ್ರೆ ಕೈಗೊಂಡಿದ್ದರು.


ಫೆ.15 ರಂದು ಉಮ್ರಾ ಕರ್ಮವನ್ನು ನಿರ್ವಹಿಸಿ ಹಿಂದಿರುಗಲು ಸಿದ್ದತೆ‌ ನಡೆಸಿ ಬಸ್ ಮೂಲಕ ಜಿದ್ದಾಕ್ಕೆ ಪ್ರಯಾಣ ಆರಂಭಿಸುವ ಮುನ್ನ ಅವರಿಗೆ ಆರೋಗ್ಯದಲ್ಲಿ ಏರುಪೇರು ಕಂಡು ಅವರನ್ನು ಸ್ಥಳೀಯ ಅಸ್ಪತ್ರೆಗೆ ದಾಖಲಿಸಲಾಯಿತು.


ಅಲ್ಲಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದು
ಮೃತರು ಪತ್ನಿ, ಪುತ್ರ ಮಹಮ್ಮದ್ ಕುಂಞಿ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!