ಸುಳ್ಯ: ಕ್ಲಿನಿಕ್’ಗೆ ಹೋದ ನವ ವಿವಾಹಿತೆ ನಾಪತ್ತೆ; ಪತಿಯಿಂದ ಸುಳ್ಯ ಠಾಣೆಗೆ ದೂರು
ಸುಳ್ಯ ತಾಲೂಕು ಮರ್ಕಂಜ ಗ್ರಾಮದ ರಾಜಶೇಖರ ಎಂಬವರ ಪತ್ನಿ ನವ ವಿವಾಹಿತೆ ಕೀರ್ತಿಶ್ರೀ (26.ವ) ಜ. 21ರಂದು ಎಲಿಮಲೆ ಕ್ಲಿನಿಕ್ ಗೆ ಔಷಧಿಗೆ ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು ಆಕೆಯನ್ನು ಹುಡುಕಿ ಕೊಡುವಂತೆ ಸುಳ್ಯ ಪೊಲೀಸ್ ಠಾಣೆಗೆ ಪತಿ ರಾಜಶೇಖರ ಎಂಬುವವರು ದೂರು ನೀಡಿದ್ದಾರೆ.

ಆರೋಗ್ಯ ಸರಿ ಇಲ್ಲವೆಂದು ನನ್ನ ಪತ್ನಿ ನನ್ನ ಬಳಿ ಹೇಳಿದ್ದು ನಾನು ಆಕೆಯನ್ನು ಆಸ್ಪತ್ರೆಗೆ ಹೋಗಲೆಂದು ನನ್ನ ಮನೆಯಿಂದ ನನ್ನ ಜೀಪಿನಲ್ಲಿ ಬೆಳಿಗ್ಗೆ 10 ಗಂಟೆಗೆ ಕರೆದುಕೊಂಡು ಹೋಗಿದ್ದು ಬಳಿಕ ಎಲಿಮಲೆಯ ಕ್ಲಿನಿಕ್ ಗೆ ಹೋಗಲೆಂದು ಆಕೆಯನ್ನು ಬಸ್ಸಿನಲ್ಲಿ ಹತ್ತಿಸಿದ್ದು, 10.30 ಕ್ಕೆ ಅವಳ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು.
ಬಳಿಕ ನಾನು ಆಕೆಯ ತಾಯಿಯ ಮನೆಗೆ ಫೋನ್ ಮಾಡಿ ಕೇಳಿದಾಗ ಅಲ್ಲಿಗೂ ಕೂಡ ಆಕೆ ಬಂದಿರುವುದಿಲ್ಲ ಎಂಬ ವಿಷಯವನ್ನು ಅವರ ತಾಯಿ ತಿಳಿಸಿರುತ್ತಾರೆ. ನಂತರ ನಮಗೆ ತಿಳಿದಿರುವ ಎಲ್ಲಾ ಕಡೆಗಳಲ್ಲಿ ಆಕೆಯ ಸಂಬಂಧಿಕರ ಮನೆಗಳಲ್ಲಿಯೂ ಕೂಡ ವಿಚಾರಿಸಿದಾಗ ಯಾವುದೇ ಮಾಹಿತಿ ಲಭಿಸಿರುವುದಿಲ್ಲ. ಆದುದರಿಂದ ತಾವುಗಳು ಕಾಣೆಯಾಗಿರುವ ನನ್ನ ಪತ್ನಿ ಕೀರ್ತಿಶ್ರೀಯನ್ನು ಪತ್ತೆಹಚ್ಚಿ ಕೊಡಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆಕೆ ಕಾಣೆಯಾಗಿದ್ದ ಸಂದರ್ಭ ಹಸಿರು ಬಣ್ಣದ ಚೂಡಿದಾರ ಧರಿಸಿದ್ದು ಸುಮಾರು 5 ಅಡಿ 3 ಇಂಚು ಎತ್ತರವಿದ್ದು ಕನ್ನಡ,ಅರೆ ಗನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಮಾತನಾಡಬಲ್ಲವರಾಗಿದ್ದಾರೆ .
ಈ ಮಹಿಳೆಯನ್ನು ಯಾರಾದ್ರೂ ಕಂಡುಬಂದಲ್ಲಿ ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸುಳ್ಯ ಪೊಲೀಸ್ ಪ್ರಕಟನೆ ನೀಡಿದೆ.