ಇಸ್ಲಾಮಿಕ್ ಹಾಡುಗಾರ ತ್ವಾಹ ತಂಙಳ್ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತ: ದೊಡ್ಡ ಆಪಾಯದಿಂದ ಪಾರಾಗಿದ್ದೇವೆ-ತ್ವಾಹ ತಂಙಳ್
ಸುಳ್ಯ: ಇಸ್ಲಾಮಿಕ್ ಹಾಡುಗಾರ ತ್ವಾಹ ತಂಙಳ್ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಗೊಂಡಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಅವರು , ನಾವು ಸದ್ಯ ಆಪಾಯದಿಂದ ಪಾರಾಗಿದ್ದೇವೆ , ನಮಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಹೆಚ್ಚಿನ ಗಾಯಗಳೇನೂ ಆಗಿಲ್ಲ. ಯಾರು ಕೂಡ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
![](http://newsbites.in/wp-content/uploads/2022/11/IMG_20221127_083703.jpg)
ಬೆಳ್ಳಾರೆ ಇಂದ್ರಾಜೆ ಎಂಬಲ್ಲಿ ನಡೆದ ಕಾರು ಅಪಘಾತದಲ್ಲಿ ಸಣ್ಣ ಪುಟ್ಟ ಗಾಯಗಳಾಗಿದ್ದವು. ಇವರೊಂದಿಗೆ ಪ್ರಯಾಣಿಸುತ್ತಿದ್ದ ಮತ್ತೊರ್ವ ಹಾಡುಗಾರ ಶಾಹಿನ್ ಬಾಬು ಅವರಿಗೂ ಗಾಯಗಳಾಗಿದ್ದವು. ಇವರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಈಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ತ್ವಾಹ ತಂಂಙಳ್ ಹಾಗೂ ಶಾಹಿನ್ ಬಾಬು ಅವರು ಪ್ರಸಿದ್ಧ ಇಸ್ಲಾಮಿಕ್ ಬುರ್ದಾ ಹಾಡುಗಾರರಾಗಿದ್ದಾರೆ.