ಸುಳ್ಯ: ಇಸ್ಲಾಮಿಕ್ ಹಾಡುಗಾರ ತ್ವಾಹ ತಂಙಳ್ ಅವರ ಕಾರು ಅಪಘಾತ- ಆಸ್ಪತ್ರೆಗೆ ದಾಖಲು |ಕಾರಿನಲ್ಲಿದ್ದ ಶಾಹಿನ್ ಬಾಬು ಅವರಿಗೂ ಗಾಯ
ಸುಳ್ಯ: ಬೆಳ್ಳಾರೆ ಸಮೀಪದ ಇಂದ್ರಾಜೆ ಎಂಬಲ್ಲಿ ತ್ವಾಹ ತಂಙಳ್ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಗೊಂಡ ಬಗ್ಗೆ ವರದಿಯಾಗಿದೆ. ಇವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಇನ್ನೊರ್ವ ಹಾಡುಗಾರ ಶಾಹಿನ್ ಬಾಬು ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಸುಳ್ಯದ ಆಸ್ಪತ್ರೆಗೆ ದಾಖಲಾಗಿಸಲಾಗಿದೆ ಎಂದು ತಿಳಿದುಬಂದಿದೆ.
ತ್ವಾಹ ತಂಂಙಳ್ ಹಾಗೂ ಶಾಹಿನ್ ಬಾಬು ಅವರು ಪ್ರಸಿದ್ಧ ಇಸ್ಲಾಮಿಕ್ ಹಾಡುಗಾರರಾಗಿದ್ದಾರೆ.