ಸುಳ್ಯ: ಕಲ್ಲುಗುಂಡಿ ಸಮೀಪ KSRTC ಬಸ್-ಲಾರಿ ನಡುವೆ ಅಪಘಾತ: ಹಲವರಿಗೆ ಗಾಯ
ಸುಳ್ಯ ಕಲ್ಲುಗುಂಡಿ ಸಮೀಪ ಮಾಣಿ ಮೈಸೂರು ಹೆದ್ದಾರಿ ಕಡಪಾಲಬಳಿ ಕೆ ಎಸ್ ಆರ್ ಟಿ ಸಿ ಬಸ್ಸು ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ ಕೆಲವು ಪ್ರಯಾಣಿಕರಿಗೆ ಗಾಯವಾದ ಘಟನೆ ಇದೀಗ ವರದಿಯಾಗಿದೆ.
ಅಪಘಾತದಿಂದ ಲಾರಿ ಚಾಲಕ ಸೀಟಿನಲ್ಲಿ ಸಿಲುಕಿಕೊಂಡಿದ್ದು ಸ್ಥಳೀಯರು ಕಾರ್ಯಾಚರಣೆಯ ಮೂಲಕ ಹೊರತರಲು ಪ್ರಯತ್ನಿಸುತ್ತಿದ್ದಾರೆ.
ಮಡಿಕೇರಿಯಿಂದ ಉಡುಪಿ ಕಡೆ ತೆರಳುತ್ತಿದ್ದ ಬಸ್ಸು ಸುಳ್ಯದಿಂದ ಮಡಿಕೇರಿ ಕಡೆ ಹೋಗುತ್ತಿದ್ದ ಲಾರಿ ನಡುವೆ ಈ ಡಿಕ್ಕಿ ಸಂಭವಿಸಿದೆ.
ಸ್ಥಳೀಯರು ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಸುಳ್ಯದ ಆಸ್ಪತ್ರೆಗೆ ತಂದು ದಾಖಲಿಸುತ್ತಿದ್ದಾರೆ.