ಸುಳ್ಯ ಲೋಕ್ ಅದಾಲತ್’ನಲ್ಲಿ 300ಕ್ಕೂ ಹೆಚ್ಚು ಅಧಿಕ ಪ್ರಕರಣಗಳಲ್ಲಿ ಒಂದು ಕೋಟಿಗೂ ಅಧಿಕ ರೂಪಾಯಿಗಳ ಪ್ರಕರಣ ಇತ್ಯರ್ಥ
ಸುಳ್ಯ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ, ವಕೀಲರ ಸಂಘ ಪೊಲೀಸ್ ಇಲಾಖೆ ಇದರ ಸಹಯೋಗದಲ್ಲಿ ಸುಳ್ಯ ನ್ಯಾಯಾಲಯದ ಆವರಣದಲ್ಲಿ ಇಂದು ಮೇಗಾ ಲೋಕ್ ಅದಾಲತ್ ಕಾರ್ಯಕ್ರಮ ನಡೆಯಿತು.
ಸುಳ್ಯ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶೆ ಕು. ಅರ್ಪಿತಾ ರವರ ನೇತೃತ್ವದಲ್ಲಿ ಹಿರಿಯ ವಕೀಲ ಬಿ ವೆಂಕಪ್ಪಗೌಡ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನೂರಾರು ಮಂದಿ ಪಲಾನುಭವಿಗಳು ಅದಾಲತಿನಲ್ಲಿ ಭಾಗವಹಿಸಿ ತಮ್ಮ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡರು. ಇಂದಿನ ಲೋಕ್ ಅದಾಲತ್ತಿನಲ್ಲಿ ಹಿರಿಯ ನ್ಯಾಯಾಲಯ ಮತ್ತು ಹಿರಿಯ ನ್ಯಾಯಾಲಯದ ಒಟ್ಟು 578 ಪ್ರಕರಣಗಳಲ್ಲಿ 313 ಪ್ರಕರಣಗಳು ಇತ್ಯರ್ಥಗೊಂಡವು.
ಹಿರಿಯ ನ್ಯಾಯಾಲಯದಲ್ಲಿ 112 ಪ್ರಕರಣಗಳು,203 ಪ್ರಕರಣಗಳು ಕಿರಿಯ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡಿತು.
ಇವುಗಳಲ್ಲಿ ಬ್ಯಾಂಕ್ ಪ್ರಕರಣಗಳಿಂದ 11 ಲಕ್ಷ 500 ರೂಪಾಯಿಗಳು, ಹಿರಿಯ ನ್ಯಾಯಾಲಯದಲ್ಲಿ 2 ಲಕ್ಷದ 215 ರೂಪಾಯಿಗಳು ಕಿರಿಯ ನ್ಯಾಯಾಲಯದಲ್ಲಿ 94 ಲಕ್ಷದ 93 ಸಾವಿರದ 528 ರೂಪಾಯಿಗಳು ಇತ್ಯರ್ಥಗೊಂಡವು.
ವಿಶೇಷ ಪ್ರಕರಣ ಒಂದರಲ್ಲಿ ಗುತ್ತಿಗಾರು ಪರಿಸರದ ಒಂದು ಕುಟುಂಬದ ಜಮೀನಿನ ವಿಷಯಕ್ಕೆ ಸಂಬಂಧಿಸಿದ 20ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದ ಪ್ರಕರಣ ಇಂದಿನ ಅದಾಲತಿನಲ್ಲಿ ರಾಜಿಯಲ್ಲಿ ಸರಿಪಡಿಸಿಕೊಳ್ಳಲಾಯಿತು.
ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ವಕೀಲರುಗಳಾದ ದಳ ಸುಬ್ರಾಯ ಭಟ್, ಶ್ರೀಮತಿ ರಾಬಿಯ, ವಕೀಲರ ಸಂಘದ ಅಧ್ಯಕ್ಷ ಕೆ ನಾರಾಯಣ, ಸಂಘದ ಪದಾಧಿಕಾರಿಗಳು ಸದಸ್ಯರು, ಹಿರಿಯ ಕಿರಿಯ ವಕೀಲರುಗಳು, ನ್ಯಾಯಾಲಯದ ಸಿಬ್ಬಂದಿ ವರ್ಗದವರು, ಪೊಲೀಸ್ ಸಿಬ್ಬಂದಿಗಳು ಸಹಕರಿಸಿದರು.