ಹೊತ್ತಿ ಉರಿದ ಮುಂಬೈ-ಮಂಗಳೂರು ಖಾಸಗಿ ಬಸ್- ಟೈರ್ ಸ್ಫೋಟ
ಹುಬ್ಬಳ್ಳಿ: ಖಾಸಗಿ ಬಸ್‌ವೊಂದು ಟಯರ್ ಸ್ಫೋಟಗೊಂಡು ಏಕಾಏಕಿ ಹೊತ್ತಿ ಉರಿದುಕೊಂಡಿದ್ದು ಚಾಲಕನ ಸಮಯ ಪ್ರಜ್ಞೆಯಿಂದಾಗಿ ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿರುವ ಘಟನೆ ಇಂದು ಬೆಳಗಿನ ಜಾವ ಹುಬ್ಬಳ್ಳಿ ಹೊರವಲಯದ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ಖಾಸಗಿ ಬಸ್ ಮುಂಬೈನಿಂದ ಮಂಗಳೂರಿನಿಂದ ಕಡೆಗೆ ಚಲಿಸುತ್ತಿತ್ತು. ಟೈರ್ ಸ್ಫೋಟಗೊಂಡು ಏಕಾಏಕಿ ಬಸ್ಗೆ ಬೆಂಕಿ ತಗುಲಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.