ಕರಾವಳಿ

ಸುಳ್ಯ: ಕಡಬ ತಾಲೂಕಿನ ಎಡಮಂಗಲ ಗ್ರಾಮದ ಕಲ್ಲೆಂಬಿ ಎಂಬಲ್ಲಿ ಕೃಷಿ ಉದ್ದೇಶಕ್ಕಾಗಿ ಭೂಮಿಯನ್ನು ಸಮತಟ್ಟು ಮಾಡುವಾಗ ಪುರಾತನ ಗುಹೆಯೊಂದು ಪತ್ತೆಯಾಗಿದೆ.

ಗುಹೆಯನ್ನು ಸಂಶೋಧಿಸಿದಾಗ ಮಣ್ಣಿನ ಮಡಿಕೆಗಳು ಮತ್ತು ಕುಂಬಾರಿಕೆಗಳ ತುಣುಕುಗಳು ಸೇರಿದಂತೆ ಮತ್ತಿತರ ವಸ್ತು-ಮ ಪದಾರ್ಥಗಳು ದೊರೆತಿವೆ.

ಪುರಾತತ್ವ ವಸ್ತುಗಳ ಸಂಶೋಧಕ ಹಾಗೂ ಮುಲ್ಕಿ ಸುಂದರರಾಮ ಶೆಟ್ಟಿ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದ ಪ್ರಾಧ್ಯಾಪಕರಾದ ಪ್ರೋ.ಟಿ.ಮುರುಗೇಶಿ ಪ್ರಕಾರ ಕಬ್ಬಿಣದ ಯುಗ ಅಥವಾ ಮೆಗಾಲಿಥಿಕ್ ಕಾಲದ ಗುಹೆಯಾಗಿರಬಹುದು ಎಂದು ಅಂದಾಜಿಸಲಾಗಿದೆ.

ಈ ಹಿಂದೆ ಮೂಡುಬಿದಿರೆಯ ಸಮೀಪದ ಮೂಡು ಕೊಣಾಜೆಯಲ್ಲಿ ಮತ್ತು ಕೊಡಗಿನ ಹೆಗ್ಗಡೆಹಳ್ಳಿ ಹಾಗೂ ಸಿದ್ದಲಿಂಗಪುರದ ಸಮಾಧಿಯಲ್ಲಿ ಪತ್ತೆಯಾದ ಮಡಿಕೆಗಳನ್ನು ಇದು ಹೋಲುತ್ತವೆ.

ಜೊತೆಗೆ, ಅವುಗಳ ನಿರ್ಮಾಣ ಶೈಲಿಯು ಕೇರಳದ ಮೆಗಾಲಿಥಿಕ್ ಸಮಾಧಿಗಳಿಗೆ ಹೆಚ್ಚು ಹೋಲುತ್ತಿದೆ ಎಂದು ಶಂಶೋಧಕರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!