ಬೆಂಗಳೂರು: ‘ಹೆಂಡತಿ ನನಗೆ ಹೊಡೆಯುತ್ತಿದ್ದಾಳೆ’ ಎಂದು ಪ್ರಧಾನಿ ಮೋದಿಗೆ ಪತ್ರ ಬರೆದ ಗಂಡ!
ಬೆಂಗಳೂರು : ಹೆಂಡತಿ ಹೊಡೆಯುತ್ತಿದ್ದಾಳೆ ಎಂದು ಪತಿಯೊಬ್ಬ ಪ್ರಧಾನಿ ನರೇಂದ್ರ ಮೋದಿ ಸೇರಿ ಕೇಂದ್ರ ಕಾನೂನು ಸಚಿವರಿಗೇ ದೂರು ನೀಡಿದ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಯದುನಂದನ್ ಆಚಾರ್ಯ ಎನ್ನುವ ಖಾತೆಯಿಂದ “ಯಾರಾದರೂ ನನಗೆ ಸಹಾಯ ಮಾಡುವರೇ? ಅಥವಾ ಇದು ಸಂಭವಿಸಿದಾಗ ಯಾರಾದರೂ ನನಗೆ ಸಹಾಯ ಮಾಡಿದ್ದಾರೆಯೇ? ಇಲ್ಲ, ಏಕೆಂದರೆ ನಾನು ಒಬ್ಬ ಗಂಡಸು! ನನ್ನ ಹೆಂಡತಿ ನನ್ನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದಳು, ಇದು ನೀವು ಹೆಚ್ಚಿಸುವ ನಾರಿ ಶಕ್ತಿಯೇ? ಇದಕ್ಕಾಗಿ ನಾನು ಅವಳ ಮೇಲೆ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ಹಾಕಬಹುದೇ? ಇಲ್ಲ!” ಎಂದು ಗಾಯಗೊಂಡಿರುವ ಫೋಟೋ ಸಮೇತ ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿ, ಕಾನೂನು ಸಚಿವ ಕಿರಣ್ ರಿಜಿಜು, ಬೆಂಗಳೂರು ಪೊಲೀಸ್ ಆಯುಕ್ತರನ್ನು ಟ್ಯಾಗ್ ಮಾಡಿದ್ದಾರೆ.
ಪೊಲೀಸರು ಟ್ವೀಟ್ ಗೆ ಪ್ರತಿಕ್ರಿಯಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.