ರಾಷ್ಟ್ರೀಯ

ನವಜಾತ ಶಿಶುವಿಗೆ ಎದೆಹಾಲು ನೀಡಿ ರಕ್ಷಿಸಿದ ಮಹಿಳಾ ಪೊಲೀಸ್ ಅಧಿಕಾರಿ ರಮ್ಯಾ



ಕೋಝಿಕೋಡ್‌: ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಕಾಣೆಯಾಗಿದ್ದ ಮಗುವಿಗೆ ಎದೆ ಹಾಲು ನೀಡಿ ರಕ್ಷಿಸಿದ ಘಟನೆ ಅಕ್ಟೋಬರ್ 22ರಂದು ಕೇರಳದ ಕೋಝಿಕೋಡ್‌ನಲ್ಲಿ ನಡೆದಿದೆ.

ಚೆವಾಯೂರ್ ಪೊಲೀಸ್ ಠಾಣೆಗೆ 22 ವರ್ಷದ ಮಹಿಳೆಯೊಬ್ಬರು ಹೆರಿಗೆಯಾದ 12 ದಿನಗಳ ನಂತರ ತನ್ನ ಮಗು ಕಾಣೆಯಾಗಿದೆ ಎಂದು ದೂರು ನೀಡಿದ್ದರು. ತನ್ನ ಪತಿಯೇ ಮಗುವನ್ನು ಅಪಹರಿಸಿದ್ದಾರೆ ಎಂದು ಮಗುವಿನ ತಾಯಿ ಹೇಳಿದ್ದಾರೆ.

ಪೊಲೀಸರು ವಿಚಾರಣೆ ನಡೆಸಿ ಪತ್ತೆ ಮಾಡುವ ಕಾರ್ಯಚರಣೆಯಲ್ಲಿ ಯಶಸ್ವಿಯಾಗಿ ವಯನಾಡಿನ ಸುಲ್ತಾನ್ ಬತ್ತೇರಿಯಲ್ಲಿ ಮಗುವನ್ನು ಪತ್ತೆ ಮಾಡಿದ್ದಾರೆ. ಮಗು ಇರುವ ಸ್ಥಳಕ್ಕೆ ಸಿವಿಲ್ ಪೊಲೀಸ್ ಅಧಿಕಾರಿ ರಮ್ಯಾ ಎಂಆರ್ ತಂಡದೊಂದಿಗೆ ಬಂದಿದ್ದಾರೆ.

ಆದರೆ ಈ ಸಮಯದಲ್ಲಿ ಮಗುವಿಗೆ ದೇಹದಲ್ಲಿ ಸೆಕ್ಕರೆ ಮಟ್ಟ ಕಡಿಮೆ ಇದೆ ಎಂದು ಮಗುವಿಗೆ ತಾಯಿಯ ಎದೆ ಹಾಲು ಬೇಕಿದೆ ಎಂದು ವೈದ್ಯರು ಹೇಳಿದರೆ, ಈ ಕಾರಣಕ್ಕೆ ಪೊಲೀಸ್ ಅಧಿಕಾರಿ ರಮ್ಯಾ ಎಂಆರ್ ತನ್ನ ಎದೆ ಹಾಲು  ನೀಡಿದ್ದಾರೆ. ಈ ಕಾರ್ಯಕ್ಕೆ ರಮ್ಯಾ ಅವರನ್ನು ರಾಜ್ಯ ಪೊಲೀಸ್ ಮುಖ್ಯಸ್ಥ ಅನಿಲ್ ಕಾಂತ್ ಅವರು ಗೌರವಿಸಿದ್ದಾರೆ. ಹೈಕೋರ್ಟ್ ನ್ಯಾಯಾಧೀಶ ದೇವನ್ ರಾಮಚಂದ್ರನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರದಲ್ಲಿ ಈ ಕಾರ್ಯಕ್ಕೆ ರಮ್ಯಾ ಅವರನ್ನು ಅನಿಲ್ ಕಾಂತ್ ಅವರು ಸನ್ಮಾನಿಸಿ, ಪ್ರಶಂಸಾ ಪತ್ರವನ್ನು ನೀಡಿದರು. ರಮ್ಯಾ ಅವರ ಕರುಣೆಯ ಕಾರ್ಯವನ್ನು ಗಮನಿಸಿದ ಹೈಕೋರ್ಟ್ ನ್ಯಾಯಾಧೀಶ ದೇವನ್ ರಾಮಚಂದ್ರನ್ ಅವರು ಅನಿಲ್ ಕಾಂತ್ ಅವರಿಗೆ ಪತ್ರ ಬರೆದು, ಅವರ ಈ ಸಾಧನೆಯನ್ನು  ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!