ಹೆಜ್ಜೇನು ದಾಳಿ: ಕೋಟಿಗೂ ಹೆಚ್ಚು ಮೌಲ್ಯದ 2 ಕುದುರೆ ದಾರುಣ ಸಾವು
ಹೆಜ್ಜೇನು ದಿಢೀರ್ ದಾಳಿಗೆ ಸಿಲುಕಿ ಕುಣಿಗಲ್ ಸಮೀಪ ಸ್ಟಡ್ ಫಾರಂನಲ್ಲಿ ವಂಶಾಭಿವೃದ್ಧಿಗೆ ಬಳಸುತ್ತಿದ್ದ ತಲಾ ₹1 ಕೋಟಿಗೂ ಹೆಚ್ಚು ಮೌಲ್ಯದ 2 ಕುದುರೆಗಳು ಮೃತಪಟ್ಟಿರುವ ಘಟನೆ ಜ.6ರಂದು ನಡೆದಿದೆ.

ಅಮೆರಿಕ ಮೂಲದ ಏರ್ ಸಪೋರ್ಟ್ ಮತ್ತು ಐರ್ಲೆಂಡ್ ಮೂಲದ ಸನಸ್ ಪರ್ ಅಕ್ಷಮ್ ಹೆಸರಿನ ಕುದುರೆಗಳು ಮೃತಪಟ್ಟಿವೆ.
ಬಯಲಿನಲ್ಲಿ ಮೇಯುವಾಗ ಏಕಾಏಕಿ ಹೆಜ್ಜೇನು ದಾಳಿ ಮಾಡಿದ್ದು ಅಸ್ವಸ್ಥಗೊಂಡಿದ್ದ ಕುದುರೆಗಳಿಗೆ ಚಿಕಿತ್ಸೆ ನೀಡಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿವೆ.