ಪುತ್ತೂರು: ಹೆದ್ದಾರಿಗೆ ಬಿದ್ದ ಬೃಹತ್ ಗಾತ್ರದ ಮರವನ್ನು ತೆರವುಗೊಳಿಸಿ ಪ್ರಶಂಸೆಗೆ ಪಾತ್ರವಾದ SKSSF ವಿಖಾಯ ತಂಡ
ಪುತ್ತೂರು: ಮಾಣಿ-ಮೈಸೂರು ಹೆದ್ದಾರಿಯ ಮುಕ್ರಂಪಾಡಿ ಸಮೀಪ ಮರ ಬಿದ್ದು ವಾಹನ ಸವಾರರಿಗೆ ಅಡಚಣೆ ಉಂಟಾಯಿತು.
ಇದನ್ನು ಮನಗಂಡು ಎಸ್ ಕೆ ಎಸ್ ಎಸ್ ಎಫ್ ಪುತ್ತೂರು ವಲಯ ವಿಖಾಯ ಕಾರ್ಯದರ್ಶಿ ಹನೀಫ್ ಮುಕ್ವೆ , ವಲಯ ಪದಾಧಿಕಾರಿ ಹನೀಫ್ ದರ್ಬೆ, ಸಂಪ್ಯ ಕ್ಲಸ್ಟರ್ ಕಾರ್ಯದರ್ಶಿ ಅಬ್ದುಲ್ ಕರೀಂ ಫೈಝಿ, ಕ್ಲಸ್ಟರ್ ಸದಸ್ಯರಾದ ಅಶ್ರಫ್ ಕ್ವಾಲಿಸ್, ಮುಕ್ವೆ ಶಾಖೆಯ ರಝಾಕ್ ಮೊದಲಾದವರು ರಸ್ತೆಯಿಂದ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
SKSSF ವಿಖಾಯ ತಂಡದ ಈ ಕಾರ್ಯ ಸಾರ್ವಜನಿಕವಾಗಿ ಪ್ರಶಂಸೆಗೆ ಪಾತ್ರವಾಗಿದೆ.