ಪುತ್ತೂರು: ಕಾರು ಮತ್ತು ಆಕ್ಟಿವಾ ನಡುವೆ ಅಪಘಾತ; ಆಕ್ಟಿವಾ ಸವಾರನಿಗೆ ಗಾಯ
ಪುತ್ತೂರು: ಕಾರು ಮತ್ತು ಆಕ್ಟಿವಾ ನಡುವೆ ಡಿಕ್ಕಿ ಸಂಭವಿಸಿ ಆಕ್ಟಿವಾ ಸವಾರ ಗಂಭೀರ ಗಾಯಗೊಂಡ ಘಟನೆ ಪುತ್ತೂರಿನ ಬೈಪಾಸ್ ರಸ್ತೆಯ ತೆಂಕಿಲ ಬಳಿ ಇಂದು ನಡೆದಿದೆ.

ಘಟನೆಯಿಂದ ಆಕ್ಟಿವಾ ನುಜ್ಜು ಗುಜ್ಜಾಗಿದ್ದು ಗಾಯಗೊಂಡ ಆಕ್ಟಿವಾ ಸವಾರನನ್ನು ಕೊಡಿಪ್ಪಾಡಿಯ ರಫೀಕ್ ಎನ್ನಲಾಗಿದೆ. ಗಾಯಾಳುವನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿ ಬಳಿಕ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.