ನ.13: ಎಸ್.ಐ.ಆರ್ ಅಕ್ರಮಗಳ ವಿರುದ್ಧ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಕುಂಬ್ರದಲ್ಲಿ ಪ್ರತಿಭಟನೆ
ಪುತ್ತೂರು: ಎಸ್ಕೆಎಸ್ಸೆಸ್ಸೆಫ್ ಕುಂಬ್ರ ವಲಯ ವತಿಯಿಂದ ಎಸ್.ಐ.ಆರ್ ಅಕ್ರಮಗಳ ವಿರುದ್ಧ ಹಾಗೂ ಮುಖ್ಯ ಚುನಾವಣಾಧಿಕಾರಿ ವಜಾಗೊಳಿಸಲು ಆಗ್ರಹಿಸಿ ದೇಶಾದ್ಯಂತ ಜಂತರ್ ಮಂತರ್ ಬೆಂಬಲಿಸಿ ಬೃಹತ್ ಪ್ರತಿಭಟನೆ ನ.13ರಂದು ಸಂಜೆ ಕುಂಬ್ರ ಜಂಕ್ಷನ್ನಲ್ಲಿ ನಡೆಯಲಿದೆ.

ಅಮಳ ರಾಮಚಂದ್ರ ಭಟ್, ಅಹ್ಮದ್ ನಯೀಂ ಫೈಝಿ, ಮಹಮ್ಮದ್ ಬಡಗನ್ನೂರು ಹಾಗೂ ಮಹಮ್ಮದ್ ಕೆ.ಎಚ್ ಸಹಿತ ಹಲವು ಪ್ರಮುಖರು ಭಾಗವಹಿಸಲಿದ್ದು ಪ್ರತಿಭಟನೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಎಸ್ಕೆಎಸ್ಸೆಸ್ಸೆಫ್ ಕುಂಬ್ರ ವಲಯ ಅಧ್ಯಕ್ಷ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ತಿಳಿಸಿದ್ದಾರೆ.




