ಕರಾವಳಿ

ದ್ವಿಚಕ್ರ ವಾಹನ ಮಗುಚಿ ಸವಾರನಿಗೆ ಗಾಯ


ಕಡಬ: ಕಿದು ಸಿಪಿಸಿಆರ್‌ಐ ಬಳಿ ದ್ವಿಚಕ್ರ ವಾಹನ ರಸ್ತೆಗೆ ಮಗುಚಿ ಬಿದ್ದ ಪರಿಣಾಮ ಸವಾರ ಗಾಯಗೊಂಡು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ ಘಟನೆ ನ.10 ರಂದು ರಾತ್ರಿ ನಡೆದಿದೆ.

ಬಿಳಿನೆಲೆಯಿಂದ ಸುಬ್ರಹ್ಮಣ್ಯ ಕಡೆಗೆ ದ್ವಿಚಕ್ರ ವಾಹನದಲ್ಲಿ ಗಣೇಶ್ (56) ಎಂಬವರು ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ. 135/2026ರಂತೆ ಬಿಎನ್‌ಎಸ್ ಕಲಂ 281, 125(a) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!