ಕುಂಬ್ರ ವರ್ತಕರ ಸಂಘದಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹರ್ಷ ಕುಮಾರ್ ರೈ ಮಾಡಾವು, ಪತ್ರಕರ್ತ ಸಿಶೇ ಕಜೆಮಾರ್ ಗೆ ಸನ್ಮಾನ
ಪುತ್ತೂರು: ದ.ಕ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹರ್ಷ ಕುಮಾರ್ ರೈ ಮಾಡಾವು ಹಾಗೂ ಪುತ್ತೂರು ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಸಿಶೇ ಕಜೆಮಾರ್ ಅವರಿಗೆ ಕುಂಬ್ರ ವರ್ತಕರ ಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮ ನ.7ರಂದು ನಡೆಯಿತು.

ನ್ಯಾಯವಾದಿ ದುರ್ಗಾಪ್ರಸಾದ್ ರೈ ಕುಂಬ್ರ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಪಿ.ಕೆ. ಮಹಮ್ಮದ್ ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನಿತರ ಪರಿಚಯವನ್ನು ಭವ್ಯ ರೈ ಮತ್ತು ರೇಷ್ಮಾ ಮೇಲ್ವಿನ್ ವಾಚಿಸಿದರು. ವೇದಿಕೆಯಲ್ಲಿ ಪುರಂದರ ರೈ ಕೊರಿಕಾರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಸದಾಶಿವ, ಪ್ರದೀಪ್ ಶಾಂತಿವನ, ಡಾ ಲಕ್ಷ್ಮಣ ಕೆ, ಉದಯ ಆಚಾರ್ಯ ಸಹಿತ
ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು. ಮೇಲ್ವಿನ್ ಮೊಂತೆರೋ ಸ್ವಾಗತಿಸಿದರು. ನಾರಾಯಣ ಪೂಜಾರಿ ಕುರಿಕ್ಕಾರ ವಂದಿಸಿದರು. ಸಂಶುದ್ದೀನ್ ಎ.ಆರ್ ಕಾರ್ಯಕ್ರಮ ನಿರೂಪಿಸಿದರು.




