ಕಬಕ-ವಿಟ್ಲ ರಸ್ತೆಗೆ ಶಾಸಕರಿಂದ ಡಾಮರೀಕರಣದ ಭರವಸೆ- ಪ್ರತಿಭಟನೆ ಮುಂದೂಡಿಕೆ

ಪುತ್ತೂರು: ಕಬಕ ವಿಟ್ಲ ರಸ್ತೆ ದುರಸ್ಥಿಗಾಗಿ ಆಗ್ರಹಿಸಿ ಪ್ರತಿಭಟನೆಯನ್ನು ನಡೆಸಲು ಉದ್ದೇಶಿಸಲಾಗಿತ್ತು.
ಈ ಸಂದರ್ಭದಲ್ಲಿ ಶಾಸಕರು 13 ಕೋಟಿ ರೂ ವೆಚ್ಚದಲ್ಲಿ 5.5 ಮೀಟರ್ ನಿಂದ 7.5 ಮೀಟರ್ ಅಗಲೀಕರಣಗೊಳಿಸಿ ಡಾಮರೀಕರಣಗೊಳಿಸುವ ಕಾಮಗಾರಿ 15 ದಿನದಲ್ಲಿ ಪ್ರಾರಂಭಗೊಳಿಸುವುದಾಗಿ ತಿಳಿಸಿರುವ ಪ್ರಕಾರ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಒಂದು ತಿಂಗಳೊಳಗೆ ಕಾಮಗಾರಿ ಪ್ರಾರಂಭಗೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಆಯೋಜಿಸಲಾಗುವುದು ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಹಾಗೂ ಕಬಕ ವಲಯ ಕಾಂಗ್ರೆಸ್ ಅಧ್ಯಕ್ಷರಾದ ದಾಮೋದರ್ ಮುರ ತಿಳಿಸಿದ್ದಾರೆ.