ಬಿಜೆಪಿ ಸರಕಾರ ಪೊಲೀಸರಿಗೆ ಬೇಕಾಬಿಟ್ಟಿ ಅಧಿಕಾರ ನೀಡಿದೆಯೇ?
ಗೃಹ ಸಚಿವರು ರಾಜೀನಾಮೆ ನೀಡುವುದೇ ಸೂಕ್ತ: ಕಾವು ಹೇಮನಾಥ ಶೆಟ್ಟಿ
ಪುತ್ತೂರು: ಪ್ರತಿಭಾ ಕುಳಾಯಿವರು ವಿದ್ಯಾವಂತ ಮಹಿಳೆ, ಕಣ್ಣೆದುರು ಯಾವುದೇ ಅನ್ಯಾಯ ನಡೆದರೂ ಅದನ್ನು ಪ್ರತಿಭಟಿಸುವ ಮನೋಭಾವ ಇವರದ್ದು, ಹೋರಾಟದಲ್ಲಿ ಭಾಗಿಯಾಗಿದ್ದಾರೆ ಎಂಬ ಕಾರಣಕ್ಕೆ ಇವರ ಮನೆಗೆ ತಡ ರಾತ್ರಿ ಪೊಲೀಸರು ಭೇಟಿ ನೀಡಿ ನೊಟೀಸ್ ನೀಡಿರುವುದು ಅಕ್ಷಮ್ಯ ಅಪರಾಧವಾಗಿದ್ದು ಇದನ್ನು ಖಂಡಿಸುವುದಾಗಿ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ತಿಳಿಸಿದ್ದಾರೆ.
ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುವುದು ತಪ್ಪಾ? ಪ್ರತಿಭಟನೆ ನಡೆಸುವುದು ಅಪರಾಧವೆಂಬಂತೆ ಬಿಜೆಪಿ ಸರಕಾರ ಪ್ರತಿಭಟನಾಕಾರರ ಮೇಲೆ ಪೊಲೀಸರನ್ನು ಛೂ ಬಿಟ್ಟು ಅನ್ಯಾಯದ ವಿರುದ್ದ ಧ್ವನಿ ಎತ್ತದಂತೆ ನಡೆದುಕೊಳ್ಳುತ್ತಿದೆ. ಪ್ರತಿಭಟನಾಕಾರರ ಧ್ವನಿ ಅಡಿಗಿಸಲು ಬಿಜೆಪಿ ಸರಕಾರಕ್ಕೆ ಸಾಧ್ಯವಿಲ್ಲ. ಸುರತ್ಕಲ್ ಟೋಲ್ಗೇಟ್ ವಿರುದ್ದ ಭಾಗಿಯಾದ ಅನೇಕ ಮಂದಿಗೆ ನೊಟೀಸ್ ನೀಡಲಾಗಿದೆ ಇದು ಸರಿಯಾದ ಕ್ರಮವಲ್ಲ ಎಂದರು.
ಓರ್ವ ಮಹಿಳಾ ಹೋರಾಟಗಾರ್ತಿಯಾದ, ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಮನೆಗೆ ಅವರ ಅತ್ತೆ ಮಾತ್ರ ಇರುವ ಸಮಯದಲ್ಲಿ ಭೇಟಿ ನೀಡಿ ಭಯ ಹುಟ್ಟಿಸುವ ಕೆಲಸವನ್ನು ಪೊಲೀಸರು ಮಾಡಿದ್ದಾರೆ. ಬಿಜೆಪಿ ಸರಕಾರದ ಅವಧಿಯಲ್ಲಿ ಅನ್ಯಾಯ, ಅಕ್ರಮ, ಲೂಟಿ ನಿರಂತರವಾಗಿ ನಡೆಯುತ್ತಿದೆ. ಬಡವರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಬಿಜೆಪಿ ಸರಕಾರ ಇದೀಗ ಮಹಿಳೆಯರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದು ರಾಜ್ಯದಲ್ಲಿ ಸರಕಾರ ಇದೆಯೋ ಇಲ್ಲವೋ ಎಂಬಂತೆ ಬಾಸವಾಗುತ್ತಿದ್ದು ರಾಜ್ಯದಲ್ಲಿ ವೀಕ್ ಆದ ಗೃಹ ಸಚಿವರೇ ಇದಕ್ಕೆಲ್ಲಾ ಕಾರಣ ಎಂದು ಸರಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸಿದ ಪ್ರತಿಭಟನಾಕಾರರ ಮನೆಗೆ ರಾತ್ರಿ ತೆರಳಿ ನೋಟೀಸ್ ನೀಡಿದ ಪೊಲೀಸ್ ಅಧಿಕಾರಿಗಳಿ ವಿರುದ್ದ ಕ್ರಮಕೈಗೊಳ್ಳಬೇಕು ಇಲ್ಲವಾದರೆ ಗೃಹ ಸಚಿವ ಅರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು ಎಂದು ಕಾವು ಹೇಮಾನಾಥ ಶೆಟ್ಟಿ ಅಗ್ರಹಿಸಿದ್ದಾರೆ.