ಸೊರಕೆ: ನಿಯಂತ್ರಣ ತಪ್ಪಿ ಮನೆಯ ಅಂಗಳಕ್ಕೆ ಉರುಳಿಬಿದ್ದ ಕಾರು!
ನಸುಕಿನಜಾವ ನಡೆದ ಘಟನೆ
ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಮನೆಯಂಗಳಕ್ಕೆ ಪಲ್ಟಿಯಾದ ಘಟನೆ ಜು.21ರ ನಸುಕಿನ ಜಾವ ಸೊರಕೆಯಲ್ಲಿ ನಡೆದಿದೆ.

ಹರೀಶ್ ಬಿ ಎಂಬವರ ಟಿಯಾಗೊ ಕಾರನ್ನು ಶರೀಫ್ ಎಂಬವರು ಕೂಡುರಸ್ತೆಯ ತಮ್ಮ ಮನೆಯ ಕಡೆಗೆ ಚಲಾಯಿಸುತ್ತಿದ್ದ ವೇಳೆ ಸೊರಕೆ ತಿರುವಿನಲ್ಲಿ ನಸುಕಿನ ಜಾವ 4.30ರ ವೇಳೆಗೆ ನಿಯಂತ್ರಣ ತಪ್ಪಿ ರಸ್ತೆಯ ಕೆಳಭಾಗದಲ್ಲಿದ್ದ ಸದಾನಂದ ಎಂಬವರ ಮನೆಯ ಅಂಗಳಕ್ಕೆ ಉರುಳಿ ಬಿದ್ದಿದೆ.
ಚಾಲಕ ಶರೀಫ್ ಮತ್ತು ಅವರ ಜೊತೆಗಿದ್ದ ಉಮ್ಮರ್ ಅವರು
ಅದೃಷ್ಟವಶಾತ್ ಹೆಚ್ಚಿನ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.
ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಅಪಾರ ನಷ್ಟ ಸಂಭವಿಸಿದೆ
ನಸುಕಿನ ಜಾವ ಸಮಯಪ್ರಜ್ಞೆ ಮೆರೆದ ಸ್ಥಳೀಯರು:
ಕಾರು ನಸುಕಿನ ಜಾವ ಘಟನೆ ನಡೆದಿದ್ದು
ಶಬ್ದ ಕೇಳಿ ಸದಾನಂದ ಸೊರಕೆ ಹಾಗೂ ಮನೆಯವರು ಹೊರಬಂದು ನೋಡಿದಾಗ ಕಾರು ಪಲ್ಟಿಯಾಗಿ ಬಿದ್ದಿರುವುದು ಕಂಡು ಬಂದಿದೆ.
ಕೂಡಲೇ ಸಮೀಪದಲ್ಲೇ ಇರುವ ಸದಾನಂದ ಸೊರಕೆ ಅವರ ಸಹೋದರ ಮುಂಡೂರು ಗ್ರಾ.ಪಂ ಮಾಜಿ ಸದಸ್ಯ ರಾಮಚಂದ್ರ ಸೊರಕೆ ಅವರನ್ನು ಕರೆದಿದ್ದಾರೆ. ಬಳಿಕ ಅವರೆಲ್ಲರೂ ಕಾರ್ಯಪ್ರವೃತ್ತರಾಗಿ ಕಾರೊಳಗೆ ಸಿಲುಕಿದ್ದ ಚಾಲಕ ಶರೀಫ್ ಮತ್ತು ಸಹಸವಾರ ಉಮ್ಮರ್ ಎಂಬವರನ್ನು ಹೊರಗೆ ತೆಗೆದಿದ್ದಾರೆ.
ಸದಾನಂದ ಸೊರಕೆ, ಅವರ ಪತ್ನಿ ಭಾರತಿ, ಮಕ್ಕಳಾದ ಜೀವಿತ್ ಮತ್ತು ಕನಿಷ್ಕ್, ಮುಂಡೂರು ಗ್ರಾ.ಪಂ ಮಾಜಿ ಸದಸ್ಯ ರಾಮಚಂದ್ರ ಸೊರಕೆ, ಅವರ ಪತ್ನಿ ಸುಜಾತ,
ಸ್ಥಳೀಯರಾದ ಸಂಜೀವ ನಾಯ್ಕ ಮೊದಲಾದವರು ಸಹಕರಿಸಿದರು.
ನಸುಕಿನ ಜಾವ ಕಾರ್ಯಪ್ರವೃತ್ತರಾಗಿ ಇಬ್ಬರನ್ನು ರಕ್ಷಿಸಿದ ಇವರ ಕಾರ್ಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.




