ಸುರತ್ಕಲ್: ಅಕ್ರಮವಾಗಿ ನೆಲೆಸಿದ್ದ 8 ಬಾಂಗ್ಲಾ ಪ್ರಜೆಗಳ ಬಂಧನ!
ಮಂಗಳೂರು: ಸುರತ್ಕಲ್‌ನ ಮುಕ್ಕ ಎಂಬಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರ ಮೇಲೆ ದಾಳಿ ನಡೆಸಿದ ಪೊಲೀಸರು, ಅಕ್ರಮವಾಗಿ ವಾಸವಿದ್ದ 8 ಮಂದಿ ಬಾಂಗ್ಲಾದೇಶಿ ಪ್ರಜೆಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.

ದಿನಾಂಕ 09.07.2026 ರಂದು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಸ್ಥಳದಲ್ಲಿದ್ದ 54 ಕಟ್ಟಡ ಕಾರ್ಮಿಕರ ದಾಖಲೆಗಳನ್ನು ಪರಿಶೀಲಿಸಿದಾಗ ಈ ಅಕ್ರಮ ವಲಸಿಗರು ಸಿಕ್ಕಿಬಿದ್ದಿದ್ದಾರೆ.
ವಿಚಾರಣೆಯ ವೇಳೆ, ಈ ಪ್ರಜೆಗಳು 3 ತಿಂಗಳ ಹಿಂದೆ ವೀಸಾ ಇಲ್ಲದೆ ಭಾರತದ ಗಡಿ ನುಸುಳಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ಗೆ ಬಂದಿಳಿದಿದ್ದರು. ಅಲ್ಲಿನ ಆಧಾರ್ ಕಾರ್ಡ್‌ಗಳಿಗೆ ತಮ್ಮ ಫೋಟೋ ಅಂಟಿಸಿ, ಕಲರ್ ಜೆರಾಕ್ಸ್ ಮಾಡಿ ದಾಖಲೆ ಸೃಷ್ಟಿಸಿದ್ದರು. ಕಳೆದ 2 ತಿಂಗಳಿನಿಂದ ಇಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಇವರ ಬಳಿಯಿದ್ದ ಬಾಂಗ್ಲಾದೇಶದ ನ್ಯಾಷನಲ್ ಐಡಿ ಹಾಗೂ ಜನನ ಪ್ರಮಾಣ ಪತ್ರಗಳನ್ನು ಪರಿಶೀಲಿಸಿದಾಗ ಇವರು ಬಾಂಗ್ಲಾ ನಿವಾಸಿಗಳೆಂದು ದೃಢಪಟ್ಟಿದೆ. ಮುಂದಿನ ಕ್ರಮಕ್ಕಾಗಿ ಬೆಂಗಳೂರಿನ FRRO ಕಚೇರಿಗೆ ವರದಿ ಸಲ್ಲಿಸಲಾಗಿದೆ.
ಬಂಧಿತರ ವಿವರ: 1. Md Muktar Ali(36), S/o Late Lal Mahammad, R/o Uttar Kanapara Char, Ashariadaha- 6290, Ashariadaha, Godagari,Rajshahi, Rajshahi Division, Bangladesh.
2. Md Rakibur Hossen(44), S/o Md Motiur Rahman, R/o Matikata, Matikata 6290, Ward No 8, Matikata, Godagari, Rajshahi, Bangladesh
3. Md Ajarul Islam(36), S/o Md Akramul Haqui, R/o Matikata, Matikata- 6290, Godagari, Rajshahi, Bangladesh
4. Md Zahid Hosen(18), S/o Md Nurul Islam, R/o Matikata, Matikata- 6290, Godagari, Rajshahi, Bangladesh,
5. Md Belal Hossain((36), S/o Md Aynal Haqui, R/o 733, Uttar Kanapara Char, Ashariadaha- 6290, Ashariadaha, Godagari,Rajshahi, Rahshahi Division, Bangladesh.
6. Md Hasibul Hasan Shanto (37), S/o Md Najimuddin, R/at Pirijpur, Pirijpur-6290, Ward 4, Matitala, Godagari, Rajshahi, Bangladesh
7. Md Sameul Hasan (23), S/o Md Shahidu Liton Babu, R/at Charamtola, Char Ashariadah-6290, Ward No 4, Thana: Godagari, Rajshahi, Bangladesh
8. Md Seibur Rahman, S/o Lal Mahaman, R/at Village: Uttar Kanapara, Post: Char Ashariadah-6290, Upazila: Godagari, District: Rajshahi, Bangladesh
ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಶ್ರೀಕಾಂತ್ ಹಾಗೂ ಸುರತ್ಕಲ್ ಇನ್ಸ್‌ಪೆಕ್ಟರ್ ಪ್ರಮೋದ್ ಕುಮಾರ್, ಪಿಎಸ್ಐ ರಘು ನಾಯಕ, ಠಾಣಾ ಸಿಬ್ಬಂದಿಗಳಾದ ಎ.ಎಸ್.ಐ ರಾಜೇಶ್ ಆಳ್ವ, ತಿರುಪತಿ ಅಳ್ಳೊಳ್ಳಿ, ಉಮೇಶ್, ರಾಜೇಂದ್ರ ಪ್ರಸಾದ್, ಕಾರ್ತಿಕ್, ವಿನೋದ್ ಕುಮಾರ್, ಸತೀಶ್ ಸತ್ತಿಗೇರಿ, ಸಂತೋಷ್ ಮತ್ತು ಓಂಪ್ರಕಾಶ್ ಬಿಂಗಿರವರು ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.




