ಕರಾವಳಿ

ನಿರಂಜನ್ ರೈ ಮಠಂತಬೆಟ್ಟು ನಿಧನ:
ಶಾಸಕ ಅಶೋಕ್ ರೈ  ಸಂತಾಪ


ಪುತ್ತೂರು: ತನ್ನ ಒಡನಾಡಿಯೂ, ಆತ್ಮೀಯರೂ ಆಗಿದ್ದ ಪುತ್ತೂರು ಭೂ ನ್ಯಾಯ ಮಂಡಳಿಯ ಸದಸ್ಯರಾದ ನಿರಂಜನ್ ರೈ ಮಠಂತಬೆಟ್ಟು ನಿಧನಕ್ಕೆ ಶಾಸಕ ಆಶೋಕ್ ರೈ  ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


ಮಟಂತಬೆಟ್ಟು ಮಹಿಷಮರ್ಧಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ,ಜಿಲ್ಲಾ ಕಂಬಳ ಸಮಿತಿ ಉಪಾಧ್ಯಕ್ಷರಾಗಿ, ಕಂಬಳದ ವೀಕ್ಷಕ ವಿವರಣೆ ಹಾಗೂ ತೀರ್ಪುಗಾರರಾಗಿ ಅಪಾರ ಸೇವೆ ಸಲ್ಲಿಸಿದ್ದ ಮೃತರು ಮೃದು ಸ್ವಭಾವನ ಸಜ್ಜನ ವ್ಯಕ್ತಿಯೂ ಆಗಿದ್ದರು. ಮೃತರ ಕುಟುಂಬಕ್ಕೆ ನೋವನ್ನು ಸಹಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಶಾಸಕರು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ. ಇವರ ನಿಧನದ ಹಿನ್ನೆಲೆಯಲ್ಲಿ ಬೆಂಗಳೂರಿನ ಕಾರ್ಯಕ್ರಮ ಮೊಟಕುಗೊಳಿಸಿ ಶಾಸಕರು ಇಂದು ರಾತ್ರಿ ಆಗಮಿಸಿ ಮೃತರ ಅಂತಿಮ ದರ್ಶನ ಪಡೆಯಲಿದ್ದಾರೆ

 

Leave a Reply

Your email address will not be published. Required fields are marked *

error: Content is protected !!