ಶಕುಂತಳಾ ಶೆಟ್ಟಿ ಜಾಗ ಮಾಡಿಟ್ಟು ಆಶೀರ್ವಾದ ಮಾಡಿದ್ರು,
ನಾವು ಮೆಡಿಕಲ್ ಕಾಲೇಜು ತಂದೆವು; ಶಾಸಕ ಅಶೋಕ್ ರೈ
ಪುತ್ತೂರು: ಶಕುಂತಳಾ ಶೆಟ್ಟಿ ಶಾಸಕರಾಗಿದ್ದ ವೇಳೆ ಸೇಡಿಯಾಪಿನಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡುವ ಉದ್ದೇಶದಿಂದ ಜಾಗ ಮಾಡಿಟ್ಟಿದ್ರು ಅದೇ ಜಾಗದಲ್ಲಿ ಮೆಡಿಕಲ್ ಕಾಲೇಜನ್ನು ನಾವು ತಂದೆವು,ಶ ಕುಂತಳಾ ಶೆಟ್ಟಿ ಆಶೀರ್ವಾದ ನಮ್ಮಮೇಲಿದೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.

ಅವರು ಉಪ್ಪಳಿಗೆಯಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸಂಸ್ಥೆಯ ವತಿಯಿಂದ ನಡೆದ ಸಾಮೂಹಿಜ ಸತ್ಯದತ್ತ ವೃತಪೂಜೆ ಮತ್ತು ವಿಕಾಸವಾಹಿನಿ ಸ್ವಸಹಾಯ ಸಂಘಗಗಳ ಲಾಭಾಂಶ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಮಾಡಬೇಕು ಎಂದು ಶಕುಅಕ್ಕ ಆವತ್ತೆ ಆಸೆಪಟ್ಟಿದ್ರು ಇದೇ ಕಾರಣಕ್ಕೆ ಅಲ್ಲಿ 40 ಎಕ್ರೆ ಜಾಗವನ್ನೂ ಕಾಯ್ದಿರಿಸಿದ್ರು. ಈಗ ಕಾಲೇಜು ಮಂಜೂರು ಆಗಿದೆ ನಾವು ಜಾಗ ಬದಲಾಯಿಸದೇ ಅದೇ ಜಾಗದಲ್ಲಿ ಕಟ್ಟುತ್ತಿದ್ದೇವೆ ಎಂದ ಶಾಸಕರು ಶಕುಂತಳಾ ಶೆಟ್ಟಿಯವರ ಮುಂದಾಲೋಚನೆಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.






