ಕಾಕ್ರೋಚ್ ಜನತಾ ಪಾರ್ಟಿಯ ‘ಎಕ್ಸ್’ ಖಾತೆಗೆ ಭಾರತದಲ್ಲಿ ನಿರ್ಬಂಧ

ಬೆಂಗಳೂರು: ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ‘ಎಕ್ಸ್’ ಖಾತೆಗೆ ಭಾರತದಲ್ಲಿ ನಿರ್ಬಂಧ ಹೇರಲಾಗಿದೆ.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಯುವಜನರ ಬಗ್ಗೆ ನೀಡಿದ ಹೇಳಿಕೆಗೆ ಪ್ರತಿಯಾಗಿ ಕಾಕ್ರೋಚ್ ಜನತಾ ಪಕ್ಷ ಎಂಬ ಚಳವಳಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಭಿಷೇಕ್ ದಿಪ್ಕೆ ಆರಂಭಿಸಿದ್ದರು. ಇದಕ್ಕೆ ಭಾರೀ ಬೆಂಬಲವೂ ಜಾಲತಾಣದಲ್ಲಿ ವ್ಯಕ್ತವಾಗಿತ್ತು.
ಇದೀಗ ಕೇವಲ ಐದು ದಿನಗಳಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ 14 ಮಿಲಿಯನ್ ಫಾಲೋವರ್ಸ್‌ಗಳನ್ನು ದಾಟಿದ್ದು ಹೊಸ ಸಂಚಲನ ಸೃಷ್ಟಿಸಿತ್ತು.
ಈ ಕುರಿತು ಪ್ರತಿಯಿಸಿರುವ ಸಿಜೆಪಿ ಸಂಸ್ಥಾಪಕ ಅಭಿಷೇಕ್ ದಿಪ್ಕೆ, ‘ನಿರೀಕ್ಷೆಯಂತೆ ಭಾರತದಲ್ಲಿ ಕಾಕ್ರೋಚ್ ಜನತಾ ಪಕ್ಷದ ಖಾತೆಯನ್ನು ನಿರ್ಬಂಧಿಸಲಾಗಿದೆ’ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಸರಿಯೇ ಎಂದು ಪ್ರಶ್ನಿಸಿದ್ದಾರೆ..




