CSWC ಫಾಳಿಲಾ ಪಬ್ಲಿಕ್ ಪರೀಕ್ಷೆ: ಸಾಲ್ಮರ ಮೌಂಟನ್ ವ್ಯೂ ಅಸ್ವಾಲಿಹಾ ವುಮೆನ್ಸ್ ಕಾಲೇಜಿಗೆ ಶೇ.100 ಫಲಿತಾಂಶ, 6 ಟಾಪ್ ಸ್ಟಾರ್, 7 ಡಿಸ್ಟಿಂಕ್ಷನ್
ಪುತ್ತೂರು : ಪ್ರತಿಷ್ಟಿತ CSWC ಅಧೀನದ ಫಾಳಿಲಾ – ಫಳೀಲಾ ವುಮೆನ್ಸ್ ಕಾಲೇಜ್ ಗಳ 2025-26 ನೇ ಸಾಲಿನ ವಾರ್ಷಿಕ ಪಬ್ಲಿಕ್ ಪರೀಕ್ಷೆಯಲ್ಲಿ ಸಾಲ್ಮರ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯ ಅಧೀನದ ಸಾಲ್ಮರ ಅಸ್ವಾಲಿಹಾ ವುಮೆನ್ಸ್ ಕಾಲೇಜ್ ಗೆ ಶೇ.100 ಫಲಿತಾಂಶ ಬಂದಿದ್ದು ,ಒಟ್ಟು 6 ವಿದ್ಯಾರ್ಥಿನಿಯರು ಟಾಪ್ ಸ್ಟಾರ್ ಪಡೆದರೆ 7 ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್ ಪಡೆದಿದ್ದಾರೆ.

ಫಾಳಿಲಾ ಪ್ರಥಮ ಮತ್ತು ದ್ವಿತೀಯ ವಿಭಾಗದಿಂದ ಪರೀಕ್ಷೆ ಬರೆದ ಸಾಲ್ಮರ ಅಸ್ವಾಲಿಹಾ ವುಮೆನ್ಸ್ ಕಾಲೇಜ್ ನ ಎಲ್ಲಾ ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು, ಫಾಳಿಲಾ ದ್ವಿತೀಯ ವಿಭಾಗದಿಂದ ಆಯಿಶತ್ ಜಝೀಲಾ, ಮರಿಯಂ ಮನ್ಸೂರ ಬೀವಿ, ಫಾತಿಮತ್ ಝುಹ್ರ, ಫಾತಿಮತ್ ಶಾಹಿನಾ, ಫಾತಿಮತ್ ಆಯಿಶಾ, ಮತ್ತು ಶಮ್ನಾ ಅವರು ಸ್ಟಾರ್ ಪ್ಲಸ್ ಪಡೆದರೆ ಆಯಿಶತ್ ಮುನೀಝಾ, ಖದೀಜತ್ ಶಿಬಾ, ಫಾತಿಮತ್ ಝಕಿಯಾ, ಫಾತಿಮತ್ ಸ್ವಾಲಿಹಾ,ಸಪ್ರೀನ ,ಫಾತಿಮತ್ ಮುಹ್ಸಿನ ಮತ್ತು ಫಾತಿಮತ್ ಝುಹ್ರ ಡಿಸ್ಟಿಂಕ್ಷನ್ ಪಡೆದಿದ್ದಾರೆ.




