ಕರಾವಳಿರಾಜಕೀಯ

ಮೇ.18 ಕೇಂದ್ರ ಸರಕಾರದ ವಿರುದ್ದ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ


ಪುತ್ತೂರು: ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿ ಮತ್ತು ಆಡಳಿತ ವೈಫಲ್ಯವನ್ನು ಖಂಡಿಸಿ ಮೇ.18ರಂದು ಪುತ್ತೂರು ಬಸ್ ನಿಲ್ದಾಣದ ಬಳಿಯ ಗಾಂಧಿಕಟ್ಟೆಯ ಎದುರು ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.


ಪುತ್ತೂರು ಪ್ರವಾಸಿ ಮಂದಿರದಲ್ಲಿ ಮೇ.16ರಂದು ನಡೆದ ಪುತ್ತೂರು,ವಿಟ್ಲ,ಮತ್ತು ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಪ್ರಮುಖರ ಜೊತೆ ಶಾಸಕರು ಪ್ರತಿಭಟನೆ ವಿಚಾರವಾಗಿ ಪೂರ್ವಭಾವಿ ಸಭೆಯಲ್ಲಿ ಈ ವಿಷಯ ತಿಳಿಸಿದ್ದಾರೆ.
ವಿಪರೀತ ಬೆಲೆ ಏರಿಕೆ ಜನಸಾಮಾನ್ಯರನ್ನು ಆತಂಕಕ್ಕೀಡುಮಾಡಿದ್ದು, ದಿನೇ ದಿನೇ ಪೆಟ್ರೀಲ್ ,ಡಿಸೆಲ್, ಅಡುಗೆ ಅನಿಲದ ಬೆಲೆ ಏರಿಕೆಯಾಗುತ್ತಿದೆ ಇದನ್ನು ನಿಯಂತ್ರಣ ಮಾಡುವಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ವಿಫಲವಾಗಿದೆ. ದೇಶದ ಆರ್ಥಿಕ ಸ್ಥಿತಿ ದುಸ್ತರವಾಗಿದೆ. ನಿಯಂತ್ರಿಸುವಲ್ಲಿ ವಿಫಲವಾದ ಸರಕಾರ ದೇಶದ ಜನರಲ್ಲಿ ಚಿನ್ನ ಖರೀದಿಸಬೇಡಿ, ರಸಗೊಬ್ಬರ ಖರೀದಿಸಬೇಡಿ, ಇಂಧನ ಬಳಸಬೇಡಿ ಎಂದು ಆದೇಶ ಮಾಡುತ್ತದೆ.‌ಸರಕಾರದ ವೈಫಲ್ಯವನ್ನು ಜನರ ತಲೆ ಮೇಲೇ ಹೊರಿಸುವುದು ಸರಿಯಲ್ಲ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಸತತವಾಗಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಲೇ ಇದೆ ಇದು ಯುವ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಸರಕಾರದ ಚೆಲ್ಲಾಟವಾಗಿದೆ ಇದೆಲ್ಲವನ್ನೂ ಖಂಡಿಸಿ ಮತ್ತು ಜನತೆಗೆ ಕೇಂದ್ರದ ವೈಫಲ್ಯವನ್ನು ತಿಳಿಸುವ ಉದ್ದೇಶದಿಂದ ಈ ಪ್ರತಿಭಟನೆ ಆಯೋಸಲಾಗಿದೆ ಎಂದು ತಿಳಿಸಿದರು.

 


ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ, ಬ್ಲಾಕ್ ಅಧ್ಯಕ್ಷರುಗಳಾದ ಕೃಷ್ಣಪ್ರಸಾದ್ ಆಳ್ವ, ಪದ್ಮನಾಭ ಪೂಜಾರಿ, ಯು ಟಿ ತೌಸೀಫ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀದರ್ ರೈ ಮಟಂತಬೆಟ್ಟು, ಪ್ರಚಾರ ಸಮಿತಿ  ಅಧ್ಯಕ್ಷ ಡಾ.ರಾಜರಾಂ, ಪಕ್ಷದ ಪ್ರಮುಖರಾದ ಕುಂಬ್ರ ದುರ್ಗಾಪ್ರಸಾದ್ ರೈ, ಜೋಕಿಂಡಿಸೋಜಾ,ರಮನಾಥ ವಿಟ್ಲ, ಯಾಕೂಬ್ ಮುಲಾರ್,ಅಸ್ಗರ್ ಅಲಿ ನೆಕ್ಕಿಕಾಡಿ,ಮಹಾಲಿಂಗ ನಾಯ್ಕ,ಜಯಪ್ರಕಾಶ್ ಬದಿನಾರ್, ಹೊನ್ಬಪ್ಪ ಕೈಂದಾಡಿ, ಚಂದ್ರಪ್ರಭಾ,ಸನತ್ ಕುಮಾರ್ ರೈ,ಪೂರ್ಣೇಶ್ ಭಂಡಾರಿ,ವಿಕ್ರಂ ಶೆಟ್ಟಿ,ಸುಶಾಂತ್, ಸುಮಿತ್ ಶೆಟ್ಟಿ, ರವಿಪ್ರಸಾದ್ ಶೆಟ್ಟಿ ಬನ್ನೂರು,  ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!