ಪುತ್ತೂರು: ಸತ್ಯಸಾಯಿ ಆಸ್ಪತ್ರೆಯಲ್ಲಿರುವ ‘ಬ್ರೈಟ್ ಪ್ಯಾರಾಮೆಡಿಕಲ್’ ಕಾಲೇಜಿನಲ್ಲಿ ದಾಖಲಾತಿ ಆರಂಭ

ಪುತ್ತೂರು: ವೈದ್ಯಕೀಯ ಕ್ಷೇತ್ರದಲ್ಲಿ ಬಹುಬೇಡಿಕೆಯಿರುವ ಪ್ಯಾರಾಮೆಡಿಕಲ್ ಕೋರ್ಸ್ ಕಲಿಯಲು ಆಸಕ್ತಿಯಿರುವವರಿಗೆ ’ಬೈಟ್ ಪ್ಯಾರಾಮೆಡಿಕಲ್ ಕಾಲೇಜು’ ಸವರ್ಣಾವಕಾಶವನ್ನು ಒದಗಿಸುತ್ತಿದೆ.
ಪುತ್ತೂರಿನ ಸತ್ಯಸಾಯಿ ಆಸ್ಪತ್ರೆಯಲ್ಲಿ ಕಾರ್ಯಾಚರಿಸುತ್ತಿರುವ ಬೈಟ್ ಪ್ಯಾರಾಮೆಡಿಕಲ್ ಕಾಲೇಜು ಅರೆ ವೈದ್ಯಕೀಯ ಕ್ಷೇತ್ರದಲ್ಲಿರುವ ಕೋರ್ಸ್‌ಗಳನ್ನು ನಡೆಸುತ್ತಿದ್ದು ಇಲ್ಲಿ ಕಲಿತ ಹಲವಾರು ಮಂದಿ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ. ಕಳೆದ 7 ವರ್ಷಗಳಿಂದ ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಈ ಸಂಸ್ಥೆಯಲ್ಲಿ ಈಗಾಗಲೇ ನೂರಾರು ವಿದ್ಯಾರ್ಥಿಗಳು ಕಲಿತು ಉದ್ಯೋಗದಲ್ಲಿದ್ದಾರೆ. ಅಲ್ಲದೇ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗವಕಾಶಗಳನ್ನು ಪಡೆದುಕೊಂಡಿದ್ದು ಸರಕಾರಿ, ಖಾಸಗೀ ಹಾಗೂ ಸ್ವಉದ್ಯೋಗ ಮಾಡುವ ಅವಕಾಶವನ್ನು ಕಲ್ಪಿಸುವಲ್ಲಿ ಈ ಸಂಸ್ಥೆ ಯಶಸ್ವಿಯಾಗಿದೆ. ಗುಣಮಟ್ಟದ ಶಿಕ್ಷಣವನ್ನು ನೀಡುವ ಉತ್ತಮ ಫಲಿತಾಂಶವನ್ನು ಪಡೆದುಕೊಂಡಿರುವ ಬೈಟ್ ಪ್ಯಾರಾಮೆಡಿಕಲ್ ಕಾಲೇಜು ಕೆಲವೇ ವರ್ಷಗಳಲ್ಲಿ ಅತ್ಯುತ್ತಮ ಹೆಸರನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದೆ.
ಡಾ.ಸತ್ಯಸುಂದರ್ ರಾವ್(ಎಲುಬು ಮತ್ತು ಕೀಳು ತಜ್ಞರು), ಡಾ. ಶ್ರೀಕಾಂತ್ ರಾವ್ ಐ(ಮಕ್ಕಳ ತಜ್ಞರು), ಡಾ.ಶ್ರೀ ಹರಿ ರಾವ್(ಸ್ಪೈನಲ್ ಸರ್ಜನ್) ಹಾಗೂ ಡಾ.ಅನುರಾಧಾ ಎಸ್ ರಾವ್ ಅವರ ಮಾರ್ಗದರ್ಶನದಲ್ಲಿ ಸಂಸ್ಥೆ ಯಶಸ್ವಿಯಾಗಿ ನಡೆಯುತ್ತಿದೆ.

ಯಾರಿಗೆಲ್ಲಾ ಅವಕಾಶ..?
ಎಸ್ಸೆಸ್ಸೆಲ್ಸಿ ಪಾಸ್ ಆದವರು, ಪ್ರಥಮ/ದ್ವಿತೀಯ ಪಿಯುಸಿ ಪಾಸ್/ಫೇಲ್ ಆದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಇಲ್ಲಿ ಪ್ರವೇಶ ಪಡೆಯಬಹುದಾಗಿದೆ.
ಲಭ್ಯವಿರುವ ಕೋರ್ಸ್‌ಗಳು:
ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ, ಆಪರೇಷನ್ ಥಿಯೇಟರ್ ಟೆಕ್ನಾಲಜಿ, ಅನಸ್ತೇಷಿಯಾ ಟೆಕ್ನಾಲಜಿ ಮುಂತಾದ ಅತೀ ಬೇಡಿಕೆಯಿರುವ ಕೋರ್ಸುಗಳು ಇಲ್ಲಿ ಲಭ್ಯವಿದೆ. ಆರ್ಥಿಕವಾಗಿ ಕಷ್ಟದಲ್ಲಿರುವವರು ಕಂತುಗಳ ಮೂಲಕವೂ ಫೀಸ್ ಪಾವತಿಸಲು ಸಂಸ್ಥೆ ಅವಕಾಶ ನೀಡುತ್ತಿದ್ದು ಇದು ವಿದ್ಯಾರ್ಥಿಗಳ ಪಾಲಿಗೆ ಬಹು ಉಪಯುಕ್ತವಾಗಿದೆ.

ಸಂಸ್ಥೆಯಲ್ಲಿ ಈಗಾಗಲೇ 2026-27ನೇ ಸಾಲಿನ ದಾಖಲಾತಿ ನಡೆಯುತ್ತಿದ್ದು ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ. ಆಸಕ್ತರು ಕೂಡಲೇ ಸಂಸ್ಥೆಯನ್ನು ಸಂಪರ್ಕಿಸುವಂತೆ ಬೈಟ್ ಪ್ಯಾರಾಮೆಡಿಕಲ್ ಕಾಲೇಜಿನ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9686837228, 08251-298228, 7619237228 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
2018ಲ್ಲಿ ಹೆಲ್ತ್ ಕೇರ್ ಶಿಕ್ಷಣ ಕ್ಷೇತ್ರದಲ್ಲಿ ಬೈಟ್ ಪ್ಯಾರಾಮೆಡಿಕಲ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದು ಪುತ್ತೂರಿನ ಆಸುಪಾಸಿನ ನೂರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಬಡವ-ಶ್ರೀಮಂತ ಎನ್ನುವ ವ್ಯತ್ಯಾಸವಿಲ್ಲದೇ ಎಲ್ಲ ಜಾತಿ, ಮತ, ಧರ್ಮದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸ್ಪರ್ಧಾತ್ಮಕ ದರದಲ್ಲಿ ಕಲಿಯಲು ಉತ್ತಮ ಅವಕಾಶ ಮಾಡಿಕೊಟ್ಟಿದ್ದು ವಿದ್ಯಾರ್ಥಿ ಜೀವನದ ಮೌಲ್ಯವನ್ನು ಎತ್ತಿ ಹಿಡಿಯುವುದು ನಮ್ಮ ಗುರಿಯಾಗಿದೆ. ನಮ್ಮಲ್ಲಿ ವಿದ್ಯಾರ್ಜನೆಗೈದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ತಾಲೂಕು ಮಾತ್ರವಲ್ಲದೇ ಮಂಗಳೂರು, ಬೆಂಗಳೂರು, ಸೌದಿ ಅರೇಬಿಯಾ, ದುಬೈಯಲ್ಲಿ ಸರಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಉದ್ಯೋಗದಲ್ಲಿದ್ದು ನಮಗೆ ಸಂತಸದ ವಿಚಾರ ಎಂದು ಬೈಟ್ ಕಾಲೇಜ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ಹೆಲ್ತ್ಕೇರ್ ಇನ್ಸಿಟ್ಯೂಷನ್ಸ್‌ನ ಆಡಳಿತಾಧಿಕಾರಿ ಮುಹಮ್ಮದ್ ಸಲೀಂ ತಿಳಿಸಿದ್ದಾರೆ.




