ಕ್ರೀಡೆರಾಷ್ಟ್ರೀಯ

ವಿವಾದಕ್ಕೆ ಕಾರಣವಾದ ಕ್ಯಾಚ್: RCB ಅಭಿಮಾನಿಗಳ ಆಕ್ರೋಶ

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಎ.30ರಂದು ನಡೆದ ಐ ಪಿ ಎಲ್ ಕ್ರಿಕೆಟ್ ಪಂದ್ಯದಲ್ಲಿ ಜೇಸನ್‌ ಹೋಲ್ಡರ್‌ ಹಿಡಿದ ಕ್ಯಾಚ್‌ ಈಗ ವಿವಾದಕ್ಕೆ ಕಾರಣವಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಅಂಪೈರ್‌ ತೀರ್ಪಿನ ವಿರುದ್ಧ ಆರ್ ಸಿ ಬಿ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.


ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಆರ್‌ಸಿಬಿ 7.3 ಓವರ್‌ಗಳಲ್ಲಿ 79 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. 8ನೇ ಓವರ್‌ನಲ್ಲಿ ಗುಜರಾತ್ ಟೈಟಾನ್ಸ್‌ ಬೌಲರ್‌ ಅರ್ಶದ್‌ ಖಾನ್ ಎಸೆದ 4ನೇ ಎಸೆತವನ್ನು ಆರ್‌ಸಿಬಿ ನಾಯಕ ರಜತ್‌ ಪಾಟಿದಾರ್‌ ಸಿಕ್ಸರ್‌ ಸಿಡಿಸಲು ಯತ್ನಿಸಿದ್ದು ಈ ವೇಳೆ ಬೌಂಡರಿ ಲೈನ್‌ ಬಳಿಯಿದ್ದ ಜೇಸನ್‌ ಹೋಲ್ಡರ್‌ ಡೈವ್ ಹೊಡೆದು ಕ್ಯಾಚ್‌ ಹಿಡಿದರು. ಕ್ಯಾಚ್‌ ಹಿಡಿದ 2-3 ಸೆಕೆಂಡುಗಳಲ್ಲೇ ಚೆಂಡನ್ನು ನೆಲಕ್ಕೆ ತಾಗಿರುವುದು ಗೋಚರಿಸಿತ್ತು. ಏನಾಯ್ತು ಅಂತ ಪಾಟಿದಾರ್‌ ತಿಳಿಯೋದ್ರೊಳಗೆ 3ನೇ ಅಂಪೈರ್‌ ಔಟ್‌ ತೀರ್ಪು ನೀಡಿದ್ದರು.

 


ಇತ್ತ ಬೌಂಡರಿ ಲೈನ್‌ ಬಳಿಯಿದ್ದ ಆಫ್‌ ಫೀಲ್ಡ್‌ ಅಂಪೈರ್‌ ಜೊತೆಗೆ ಕೊಹ್ಲಿ ಮಾತನಾಡಿದ್ರೂ ಪ್ರಯೋಜನವಾಗಲಿಲ್ಲ. ಕೊನೆಗೆ ನಾಯಕ ಔಟ್‌ ಎಂದೇ ತೀರ್ಪು ಖಚಿತವಾಗಿ ರಜತ್‌ ಪಾಟಿದಾರ್‌ ಮೈದಾನದಿಂದ ಹೊರಬಂದರು. ಅಂಪೈರ್‌ ತೀರ್ಪಿನ ವಿರುದ್ಧ ಕೊಹ್ಲಿ ತೀವ್ರ ಬೇಸರ ಹೊರಹಾಕಿದ್ದು ಪಾಟಿದಾರ್‌ ಔಟ್‌ ಬಳಿಕ ರನ್‌ ವೇಗ ಕಡಿತಗೊಳ್ಳುವ ಜೊತೆಗೆ ಅಲ್ಪ ಮೊತ್ತಕ್ಕೆ ಪ್ರಮುಖ ವಿಕೆಟ್‌ಗಳನ್ನು ಆರ್‌ಸಿಬಿ ಕಳೆದುಕೊಂಡಿತು. ಸದ್ಯ ಜೇಸನ್‌ ಹೋಲ್ಡರ್‌ ಅವರು ಹಿಡಿದ ಈ ಕ್ಯಾಚ್‌ ವಿವಾದಕ್ಕೆ ಕಾರಣವಾಗಿದೆ. ಆರ್‌ಸಿಬಿ ಅಭಿಮಾನಿಗಳು ಕೂಡ ಅಂಪೈರ್‌ ತೀರ್ಪಿನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!