ಮೈದಾನದ ಹೊರಗೂ ದಾಖಲೆ ಬರೆಯಲಾರಂಭಿಸಿದ ಕಿಂಗ್ ಕೊಹ್ಲಿ
ಕ್ರಿಕೆಟ್ ಮೈದಾನದ ಹೊರಗೂ ವಿರಾಟ್ ಕೊಹ್ಲಿ ದಾಖಲೆ ಬರೆಯಲು ಆರಂಭಿಸಿದ್ದಾರೆ. ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. ಇದು ಕ್ರಿಕೆಟ್ ಮೈದಾನದಲ್ಲಿ ಅಲ್ಲ, ಬದಲಾಗಿ ಇನ್ಸ್ಟಾಗ್ರಾಮ್ನಲ್ಲಿ.

ಟಿ20 ವಿಶ್ವಕಪ್ ಗೆದ್ದ ಬಳಿಕ ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಫೋಟೋಗಳ ಪೋಸ್ಟ್ ಇದೀಗ 20 ಮಿಲಿಯನ್ ಲೈಕ್ಸ್ ( 2 ಕೋಟಿಗಿಂತ ಹೆಚ್ಚು) ಮೆಚ್ಚುಗೆಗಳು ಪಡೆದುಕೊಂಡಿದೆ.
ಇದರೊಂದಿಗೆ ಅತೀ ಹೆಚ್ಚು ಇನ್ಸ್ಟಾಗ್ರಾಮ್ ಲೈಕ್ಸ್ ಪಡೆದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ದಾಖಲೆ ವಿರಾಟ್ ಕೊಹ್ಲಿ ಪಾಲಾಗಿದೆ. ಹಾಗೆಯೇ ಏಷ್ಯಾದಲ್ಲೇ ಅತೀ ಹೆಚ್ಚು ಲೈಕ್ಸ್ ಪಡೆದ 2ನೇ ಇನ್ಸ್ಟಾಗ್ರಾಮ್ ಪೋಸ್ಟ್ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.
ಇನ್ಸ್ಟಾಗ್ರಾಮ್ ಇತಿಹಾಸದಲ್ಲಿ ಅತೀ ಹೆಚ್ಚು ಲೈಕ್ಸ್ ಗಿಟ್ಟಿಸಿಕೊಂಡ ಪೋಸ್ಟ್ ಫುಟ್ಬಾಲ್ ಕಿಂಗ್ ಲಿಯೋನೆಲ್ ಮೆಸ್ಸಿ ಅವರದ್ದು.

2022ರ ಫುಟ್ಬಾಲ್ ವಿಶ್ವಕಪ್ ಗೆದ್ದ ಬಳಿಕ ಮೆಸ್ಸಿ ಹಂಚಿಕೊಂಡ ಫೋಟೋಗೆ 75 ಮಿಲಿಯನ್ (7.5 ಕೋಟಿ) ಲೈಕ್ಸ್ ಸಿಕ್ಕಿದೆ.