ಕರಾವಳಿಕ್ರೈಂ

ಸುಳ್ಯ: ಮಸೀದಿ ಕಾಣಿಕೆ ಡಬ್ಬಿ ಕಳ್ಳತನ:  ಆರೋಪಿ  ಪೊಲೀಸರ ಬಲೆಗೆ


ಸುಳ್ಯ: ಇಲ್ಲಿನ ಸಂಪಾಜೆ ಗೂನಡ್ಕದ ಮಸೀದಿಯೊಂದರ ಆವರಣದಲ್ಲಿದ್ದ ಕಾಣಿಕೆ ಡಬ್ಬಿಯನ್ನು ಕಳವು ಮಾಡಿದ್ದ ಪ್ರಕರಣದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.

ಮಾರ್ಚ್ 30ರಂದು ಗೂನಡ್ಕದಲ್ಲಿರುವ ಮಸೀದಿಯ ಆವರಣದಲ್ಲಿದ್ದ ಕಾಣಿಕೆ ಡಬ್ಬಿಯನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು.



ತನಿಖೆ ಮುಂದುವರಿಸಿದ ಪೊಲೀಸರು, ಏಪ್ರಿಲ್ 6ರಂದು ಸುಳ್ಯದ ಕೆಮ್ರಾಜೆ ಎಲಿಮಲೆ ಎಂಬಲ್ಲಿ ಆರೋಪಿ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ನಿವಾಸಿ ಮಹಮ್ಮದ್‌ ಸಲ್ಮಾನ್‌ (35) ನನ್ನು ಪತ್ತೆಹಚ್ಚಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಕಳವು ಮಾಡಲಾದ 2,000 ರೂಪಾಯಿ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಪೊಲೀಸರು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಧೀಶರು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *

error: Content is protected !!