ಅಂತಾರಾಷ್ಟ್ರೀಯ

5 ದಿನಗಳ ಕದನ ವಿರಾಮ ಘೋಷಿಸಿದ ಟ್ರಂಪ್!


ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 5 ದಿನಗಳ ಕದನ ವಿರಾಮ ಘೋಷಿಸಿದ್ದಾರೆ. ಯುದ್ಧವನ್ನು ಕೊನೆಗೊಳಿಸುವ ಕುರಿತು ‘ಧನಾತ್ಮಕ ಮಾತುಕತೆ’ಗಳ ನಂತರ ಇರಾನ್ ವಿದ್ಯುತ್ ಸ್ಥಾವರಗಳ ಮೇಲಿನ ದಾಳಿಯನ್ನು ಮುಂದೂಡುತ್ತಿರುವುದಾಗಿ ಅವರು ಘೋಷಿಸಿದ್ದಾರೆ.


ಅಮೆರಿಕ ಮತ್ತು ಇರಾನ್ ದೇಶವು ಕಳೆದ ಎರಡು ದಿನಗಳಲ್ಲಿ ಮಧ್ಯಪ್ರಾಚ್ಯದಲ್ಲಿ ನಮ್ಮ ಹಗೆತನವನ್ನು ಸಂಪೂರ್ಣ ಮತ್ತು ಸಮಗ್ರವಾಗಿ ಪರಿಹರಿಸುವ ಬಗ್ಗೆ ಉತ್ತಮ ಮತ್ತು ಧನಾತ್ಮಕ ಮಾತುಕತೆ ನಡೆಸಿದೆ ಎಂದು ವರದಿ ಮಾಡಲು ನನಗೆ ಸಂತೋಷವಾಗುತ್ತದೆ’ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಇಂಧನ ಮೂಲಸೌಕರ್ಯಗಳ ವಿರುದ್ಧ ಯಾವುದೇ ಯೋಜಿತ ಮಿಲಿಟರಿ ದಾಳಿಗಳನ್ನು ಐದು ದಿನಗಳ ಅವಧಿಗೆ ತಡೆಹಿಡಿಯುವಂತೆ ಅಮೆರಿಕದ ಯುದ್ದ ಇಲಾಖೆಗೆ ಸೂಚಿಸಲಾಗಿದೆ’ ಎಂದು ಟ್ರಂಪ್ ಹೇಳಿದ್ದಾರೆ.

ಟ್ರಂಪ್ ಅವರ ಕದನ ವಿರಾಮ ಘೋಷಣೆಯನ್ನು ಇರಾನ್ ನಿರಾಕರಿಸಿದೆ. ಯುದ್ಧ ವಿಚಾರದಲ್ಲಿ ಯಾವುದೇ ಮಾತುಕತೆ ನಡೆದಿಲ್ಲ, ನಮ್ಮ ಪ್ರತಿಕ್ರಿಯೆಗೆ ಹೆದರಿ ಟ್ರಂಪ್ ಯುದ್ಧ ವಿರಾಮ ಘೋಷಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!