ಅಮೆರಿಕ, ಇಸ್ರೇಲ್ ಜೊತೆ ಮಾತುಕತೆ ಪ್ರಶ್ನೆಯೇ ಇಲ್ಲ -ಮೊಜ್ತಬಾ ಖಮೇನಿ
ಟೆಹ್ರಾನ್: ಅಮೆರಿಕ, ಇಸ್ರೇಲ್ ಶರಣಾಗದ ಹೊರತು ಯಾವುದೇ ಮಾತುಕತೆಯ ಪ್ರಶ್ನೆಯೇ ಇಲ್ಲ ಎಂದು ಇರಾನ್ ಸರ್ವೋಚ್ಛ ನಾಯಕ ಮೊಜ್ತಾಬಾ ಖಮೇನಿ ಹೇಳಿದ್ದಾರೆ.

ಇರಾನ್ ಸರ್ವೋಚ್ಛ ನಾಯಕರಾಗಿ ಆಯ್ಕೆಗೊಂಡಿರುವ ಮೊಜ್ತಾಬಾ ಖಮೇನಿ, ಅಮೆರಿಕದೊಂದಿಗಿನ ಶಾಂತಿ ಮಾತುಕತೆಯನ್ನು ತಿರಸ್ಕರಿಸಿದ್ದಾರೆ. ಅಲ್ಲದೆ ಇದೀಗ ನಡೆಯುತ್ತಿರುವ ಯುದ್ಧದಲ್ಲಿ ಅಮೆರಿಕ ಮತ್ತು ಇಸ್ರೇಲ್ ನಮ್ಮೆದುರು ಮಂಡಿಯೂರಬೇಕು ಎಂದು ಪ್ರತಿಪಾದಿಸಿದ್ದಾರೆ.
‘ಆ ಎರಡೂ ದೇಶಗಳು ಸೋಲನ್ನು ಒಪ್ಪಿಕೊಳ್ಳಬೇಕು. ಶಾಂತಿ ಮಾತುಕತೆಯ ಸಮಯ ಮುಗಿದುಹೋಗಿದೆ. ಇರಾನ್ ಅನುಭವಿಸಿದ ಹಾನಿಗಳಿಗೆ ಪ್ರತಿಯಾಗಿ ಇಸ್ರೇಲ್ ಮತ್ತು ಅಮೆರಿಕ ಬೆಲೆ ತೆರಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.





