ಬೆಂಜಮಿನ್ ನೆತನ್ಯಾಹು ಬದುಕಿದ್ದರೆ, ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ-ಇರಾನ್
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಾವಿನ ಸುತ್ತ ವದಂತಿಗಳು ಕೇಳಿಬರುತ್ತಿರುವಾಗಲೇ, ಒಂದು ವೇಳೆ ಅವರು ಬದುಕಿದ್ದರೆ, ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ, ಹುಡುಕಿ ಕೊಲ್ಲುವುದಾಗಿ ಇರಾನ್ ಹೇಳಿರುವುದಾಗಿ ವರದಿಯಾಗಿದೆ.

‘ಮಕ್ಕಳನ್ನು ಕೊಲ್ಲುವ ಈ ಅಪರಾಧಿ ಜೀವಂತವಾಗಿದ್ದರೆ, ನಾವು ಅವನನ್ನು ಪೂರ್ಣ ಬಲದಿಂದ ಬೆನ್ನಟ್ಟಿ ಹುಡುಕುತ್ತೇವೆ ಮತ್ತು ಕೊಲ್ಲುತ್ತೇವೆ ಎಂದು ಇರಾನ್‌ನ ಕ್ರಾಂತಿಕಾರಿ ಪಡೆಗಳು ಹೇಳಿಕೆಯಲ್ಲಿ ತಿಳಿಸಿವೆ. ಬೆಂಜಮಿನ್ ನೆತನ್ಯಾಹು ಸುರಕ್ಷಿತವಾಗಿದ್ದಾರೆ ಎಂದು ಇಸ್ರೇಲ್ ಹೇಳಿದ ಬೆನ್ನಲ್ಲೇ ಇರಾನ್ ಈ ಪ್ರತಿಕ್ರಿಯೆ ನೀಡಿದೆ. ಇತ್ತ ನೆತನ್ಯಾಹು ಅವರು ಕೆಲವು ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಎಂದು ವರದಿಯಾಗಿದೆ.
ಮಾರ್ಚ್ 12ರ ಅವರ ವಿಡಿಯೋದ ಬಗ್ಗೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ಬೆಂಜಮಿನ್ ಅವರ ಒಂದು ಕೈಯಲ್ಲಿ ಆರು ಬೆರಳುಗಳು ಕಂಡುಬಂದಿದ್ದು, ಇದು ಎಐ ಬಳಸಿಕೊಂಡು ರಚಿಸಿರುವ ವಿಡಿಯೋ ಆಗಿರಬಹುದು ಎಂಬ ಅನುಮಾನ ಹುಟ್ಟುಹಾಕಿದೆ.





