ಸಾಲ್ಮರ ದಾರುಲ್ ಹಸನಿಯಾ ಅಕಾಡೆಮಿ: ಎಸ್.ಎನ್.ಇ.ಸಿ ಸಮನ್ವಯ ಶಿಕ್ಷಣದ ದಾಖಲಾತಿ ಅಭಿಯಾನಕ್ಕೆ ಕುಂಬೋಳ್ ತಂಙಳ್ ಚಾಲನೆ
ಪುತ್ತೂರು: ಸಾಲ್ಮರ ದಾರುಲ್ ಹಸನಿಯಾ ಅಕಾಡೆಮಿಯಲ್ಲಿ ಆರಂಭವಾಗಲಿರುವ ‘ಸಮಸ್ತ’ದ ಎಸ್.ಎನ್.ಇ.ಸಿ ಸಮನ್ವಯ ಶಿಕ್ಷಣದ ದಾಖಲಾತಿ ಅಭಿಯಾನಕ್ಕೆ ಕುಂಬೋಳ್ ಕುಂಞಿಕೋಯ ತಂಙಳ್ ಮತ್ತು ಸಯ್ಯಿದ್ ಅಲಿ ತಂಙಳ್ ಅವರು ಚಾಲನೆ ನೀಡಿದರು. ಕಳೆದ ಏಳು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ದಾರುಲ್ ಹಸನಿಯಾ ಅಕಾಡೆಮಿಯ ಹಿಫ್ಲುಲ್ ಖುರ್‌ಆನ್ ಕಾಲೇಜಿನಲ್ಲಿ ಪ್ರಸ್ತುತ 60 ವಿದ್ಯಾರ್ಥಿಗಳು ಹಿಫ್ಲುಲ್ ಖುರ್‌ಆನ್ ಅಧ್ಯಯನ ಮಾಡುತ್ತಿದ್ದಾರೆ.

ಇದುವರೆಗೆ ಮೂವತ್ತು ವಿದ್ಯಾರ್ಥಿಗಳು ಪವಿತ್ರ ಖುರ್‌ಆನ್ ಸಂಪೂರ್ಣ ಕಂಠಪಾಠ ಮಾಡಿ ಪೂರ್ಣಗೊಳಿಸಿದ್ದಾರೆ. ಇದೀಗ ಮುಂದಿನ ಶೈಕ್ಷಣಿಕ ವರ್ಷದಿಂದ ಸಂಸ್ಥೆಯಲ್ಲಿ, ಶಾಲೆಯ ಏಳನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ‘ಸಮಸ್ತ’ದ ಅಧೀನದ ಎಸ್.ಎನ್.ಇ.ಸಿ. ಸಮನ್ವಯ ಶಿಕ್ಷಣದ ಶರೀಅ ಪ್ಲಸ್ ‘ಸನಾಇ’ ಕೋರ್ಸ್ ಆರಂಭವಾಗಲಿದೆ. ಇದರ ದಾಖಲಾತಿ ಅಭಿಯಾನವು ಮಾರ್ಚ್ ತಿಂಗಳು ಪೂರ್ತಿ ನಡೆಯಲಿದೆ.
ಪೋಸ್ಟರ್ ಬಿಡುಗಡೆಗೊಳಿಸುವ ಸಂದರ್ಭದಲ್ಲಿ ಸಮಸ್ತ ಕೇಂದ್ರ ಮುಶಾವರ ಸದಸ್ಯ ಉಸ್ಮಾನುಲ್ ಫೈಝಿ ತೋಡಾರ್, ಸಯ್ಯಿದ್ ಯಹ್ಯ ತಂಙಳ್ ಸಾಲ್ಮರ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಸನ್ ಹಾಜಿ ಸಿಟಿ ಬಝಾರ್, ಉಪಾಧ್ಯಕ್ಷ ರಫೀಕ್ ಹಾಜಿ ಸುಲ್ತಾನ್ ಕೊಡಾಜೆ, ಪ್ರಮುಖರಾದ ಅಬ್ದುಲ್ ರಹಿಮಾನ್ ಹಾಜಿ ಬಾಳಾಯ, ಉಮರ್ ಹಾಜಿ ಸಂಪ್ಯ, ಅಬ್ದುಲ್ ರಹಿಮಾನ್ ಹಾಜಿ ಆರ್.ಟಿ.ಒ, ರಿಯಾಝ್ ಇಂಜಿನಿಯರ್ ಪರ್ಲಡ್ಕ, ಡಾ. ಶರಫರಾಝ್, ಡಿ.ಕೆ ಅಬ್ದುಲ್ ಹಮೀದ್ ಕೆಮ್ಮಾಯಿ, ಅಬ್ದುಲ್ ಕರೀಂ ದಾರಿಮಿ, ಕೆ.ಎಂ.ಎ ಕೊಡುಂಗಾಯಿ, ಸುಲೈಮಾನ್ ಮುಸ್ಲಿಯಾರ್ ಕಲ್ಲೇಗ, ಸಿನಾನ್ ಪರ್ಲಡ್ಕ, ಇ.ಎಂ ಅಶ್ರಫ್ ಪರ್ಲಡ್ಕ, ಶಂಸುದ್ದೀನ್ ಕನ್ನಂಗಾರ್, ಶಾಹಿರ್ ಯಮಾನಿ, ಖಲಂದರ್ ಶಾಫಿ ಮದನಿ, ಶಾಕಿರ್ ಯಮಾನಿ ಉಪಸ್ಥಿತರಿದ್ದರು. ಸಂಸ್ಥೆಯ ವ್ಯವಸ್ಥಾಪಕ ಅನ್ವರ್ ಸ್ವಾದಿಕ್ ಮುಸ್ಲಿಯಾರ್ ಕಾರ್ಯಕ್ರಮವ ನಿರ್ವಹಿಸಿದರು.





