ಕರಾವಳಿ

ಅಶೋಕ್ ರೈ ಯವರೇ ನಿಮ್ಮ ಅವಧಿಯಲ್ಲಿ ಪುತ್ತೂರಿನ ಚಿತ್ರಣವೇ ಬದಲಾಗಲಿದೆ: ನಿವೃತ್ತ ನ್ಯಾಯಮೂರ್ತಿ ಅಬ್ದುಲ್ ನಝೀರ್


ಪುತ್ತೂರು: ಅಶೋಕ್ ರೈ ಡೈನಾಮಿಕ್ ಎಂ ಎಲ್ ಎ , ಅವರ ಸಮಯದಲ್ಲಿ ಪುತ್ತೂರಿನ ಚಿತ್ರಣವೇ ಬದಲಾಗಲಿದೆ ಎಂದು ಸುಪ್ರಿಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ , ಅಂದ್ರಪ್ರದೇಶದ ರಾಜ್ಯಪಾಲರಾದ ಅಬ್ದುಲ್ ನಝೀರ್ ರವರು ಹೇಳಿದರು.


ಇಂದು ಪುತ್ತೂರಿನ ಆನೆಮಜಲಿನಲ್ಲಿ ನೂತನ ಕೋರ್ಟು ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ಕೋರ್ಟು ಕಟ್ಟಡ ಏನಾದರು ಬೇಕಾದರೆ ಕೇಳಿ ಉಸ್ತುವಾರಿ ಸಚಿವರಿದ್ದಾರೆ ಕೊಡುತ್ತಾರೆ. ಆ ಪ್ರಕಾರ ಪುತ್ತೂರು ಶಾಸಕ ಅಶೋಕ್ ರೈ ಅವರು ಡೈನಾಮಿಕ್ ಎಂಎಲ್ಎ ಎಂದು ಹೇಳಿದ ರಾಜ್ಯಪಾಲರು ನಿಮ್ಮ ಅವಧಿಯಲ್ಲಿ ಪುತ್ತೂರಿನ ಚಿತ್ರಣವೇ ಬದಲಾಗಲಿದೆ ಎಂದರು. ಈ ವೇಳೆ ಎದ್ದು ನಿಂತ ಶಾಸಕರು ನನ್ನ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದು ಕೈ ಮುಗಿದು ಕೃತಜ್ಞತೆ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!