ಮಹಾರಾಷ್ಟ್ರದ ಬಾರಾಮತಿ ಬಳಿ ವಿಮಾನ ಪತನ: ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮೃತ್ಯು
ಮುಂಬೈ: ಮಹಾರಾಷ್ಟ್ರದ ಬಾರಾಮತಿ ಬಳಿ ಸಂಭವಿಸಿದ ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಐದು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಅಜಿತ್ ಪರವಾರ್ ಸೇರಿದಂತೆ 6 ಸಿಬ್ಬಂದಿಗಳನ್ನು ವಿಮಾನ ಹೊತ್ತೊಯ್ಯುತ್ತಿತ್ತು ಎನ್ನಲಾಗಿದೆ. ಮುಂಬೈನಿಂದ ಬಾರಾಮತಿಗೆ ವಿಮಾನ ತೆರಳುತ್ತಿದ್ದು ಏರ್‌ಕ್ರಾಫ್ಟ್ ಲ್ಯಾಂಡಿಂಗ್ ಆಗುವ ವೇಳೆ ಬಾರಾಮತಿಯ ಹೊಲದಲ್ಲಿ ಅಪಘಾತಕ್ಕೆ ಈಡಾಗಿದೆ ಎಂದು ವರದಿಯಾಗಿದೆ.





