ಇಳಂತಿಲ ಜ್ಞಾನಭಾರತಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ
ಉಪ್ಪಿನಂಗಡಿ: ಇಳಂತಿಲ ಜ್ಞಾನಭಾರತಿ ಇಂಗ್ಲಿಷ್ ಮೀಡಿಯಂ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ “ಎನರ್ಜೈಜರ್’ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಿಸಲು ಕಲಿಯುವ ಕಲೆ” ಎಂಬ ಶೀರ್ಷಿಕೆಯಡಿಯಲ್ಲಿ ವಿಶೇಷ ಪ್ರೇರಣಾತ್ಮಕ ಕಾರ್ಯಕ್ರಮವನ್ನು ಆಯೋಜಿಸಿತ್ತು.

ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ತುಂಬುವುದು ಮತ್ತು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಅಗತ್ಯವಿರುವ ತಂತ್ರಗಳನ್ನು ಕಲಿಸಿಕೊಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.

ಬಹ್ರೇನ್‌ನ ಕಿಂಗ್‌ಡಮ್ ಯೂನಿವರ್ಸಿಟಿಯ ಎಂಬಿಎ ವಿಭಾಗದ ಮುಖ್ಯಸ್ಥರೂ ಹಾಗೂ ಸಹಾಯಕ ಪ್ರಾಧ್ಯಾಪಕರೂ ಆದ ಖ್ಯಾತ ಪ್ರೇರಕ ಭಾಷಣಕಾರ ಡಾ. ಹಬೀಬ್ ರೆಹಮಾನ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶಿಬಿರವನ್ನು ನಡೆಸಿಕೊಟ್ಟರು. ಅವರು ಪರಿಣಾಮಕಾರಿ ಕಲಿಕಾ ವಿಧಾನಗಳು, ಸಮಯ ನಿರ್ವಹಣೆ ಮತ್ತು ಪರೀಕ್ಷಾ ಒತ್ತಡವನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಮಾರ್ಗದರ್ಶನ ನೀಡಿದರು.
ಶಾಲಾ ಸಂಚಾಲಕ ಅಬ್ದುಲ್ ರವೂಫ್ ಯು.ಟಿ. ಮತ್ತು ಮುಖ್ಯೋಪಾಧ್ಯಾಯರಾದ ಇಬ್ರಾಹಿಂ ಕಲೀಲ್ ಎಚ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.





