ಅಂತಾರಾಷ್ಟ್ರೀಯ

ಹಳಿ ತಪ್ಪಿದ ರೈಲು: 13 ಮಂದಿ ಸಾವು, 98 ಜನರಿಗೆ ಗಾಯ

ದಕ್ಷಿಣ ಮೆಕ್ಸಿಕೋದ ಓಕ್ಸಾಕದಲ್ಲಿ (Oaxaca) ಇಂಟರ್ ಓಷಿಯಾನಿಕ್ ರೈಲು ಹಳಿ ತಪ್ಪಿದ ಪರಿಣಾಮ 13 ಮಂದಿ ಸಾವನ್ನಪ್ಪಿದ್ದು, 98 ಜನರು ಗಾಯಗೊಂಡಿದ್ದಾರೆ.

ಒಂಬತ್ತು ಸಿಬ್ಬಂದಿ ಹಾಗೂ 241 ಪ್ರಯಾಣಿಕರು ಸೇರಿದಂತೆ ಒಟ್ಟು 250 ಜನರಿದ್ದ ರೈಲು ಸಲೀನಾ ಕ್ರೂಜ್ ಬಂದರುನಿಂದ ಕೋಟ್ಜಾಕೋಲ್ಕೋಸ್‌ಕ್ಕೆ ತೆರಳುತ್ತಿತ್ತು. ಈ ವೇಳೆ ನಿಜಾಂಡಾ ಪಟ್ಟಣದ ಬಳಿ ತೆರಳುತ್ತಿದ್ದಾಗ ರೈಲು ಹಳಿ ತಪ್ಪಿದೆ. ಪರಿಣಾಮ 13 ಜನರು ಸಾವನ್ನಪ್ಪಿದ್ದು, 98 ಜನರು ಗಾಯಗೊಂಡಿದ್ದಾರೆ. ಈಗಾಗಲೇ 36 ಜನರಿಗೆ ಚಿಕಿತ್ಸೆ ನೀಡಲಾಗಿದೆ. ಈ ಪೈಕಿ 193 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!