ಸುಳ್ಯದಲ್ಲಿ ಶಾರದೋತ್ಸವ: ಸಂಗೀತ ಕಾರ್ಯಕ್ರಮ

ಸುಳ್ಯದಲ್ಲಿ ನಡೆದ ಅದ್ದೂರಿ ಶಾರದೋತ್ಸವ ಕಾರ್ಯಕ್ರಮದ ಶೋಭಾಯಾತ್ರೆ ಸಂದರ್ಭದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಸಾಂಸ್ಕೃತಿಕ ಸಂಘದ ವತಿಯಿಂದ ನುರಿತ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆಯಿತು . ಸಭಾಧ್ಯಕ್ಷತೆಯನ್ನು ಸಂಘದ ಗೌರವಾಧ್ಯಕ್ಷ ಯಂ ವೆಂಕಪ್ಪ ಗೌಡ ವಹಿಸಿದ್ದರು. ಉದ್ಘಾಟನೆಯನ್ನು ಉದ್ಯಮಿ ಅಶೋಕ್ ಪ್ರಭು ಸುಳ್ಯ ನೆರವೇರಿಸಿದರು. ಅತಿಥಿಯಾಗಿ ಕಾರು ಚಾಲಕ ಮಾಲಕ ಸಂಘದ ಅಧ್ಯಕ್ಷ ಜಯಂತ ಹರ್ಲಡ್ಕ ,ಸಂಘದ ಅಧ್ಯಕ್ಷ ಭೀಮ ರಾವ್ ವಾಸ್ಟರ್ ,ಹಾಗು ಗಣೇಶ ಬೇಕರಿ ಮಾಲಕ ಸಂತೋಷ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನ ನೋಟರಿ ವಕೀಲರಾದ ದೀನೇಶ್ ಅಂಬೆಕಲ್ಲು ನಡೆಸಿಕೊಟ್ಟರು .