ಪುತ್ತೂರು: ಕಳ್ಳತನ ಪ್ರಕರಣದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯದಿಂದ ಶಿಕ್ಷೆ ಪ್ರಕಟ
ಪುತ್ತೂರು: ಬಲ್ನಾಡು ಗ್ರಾಮದ ಬಬ್ಬಿಲಿ ಎಂಬಲ್ಲಿ ದಿನಾಂಕ 27.02.2022ರಂದು ನಡೆದ ಕಳ್ಳತನ ಪ್ರಕರಣದ ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

A1 ಆರೋಪಿ ಮಹಮ್ಮದ್ ಆಶ್ರಫ್ ತಾರಿಗುಡ್ಡೆ ಮತ್ತು A2 ಆರೋಪಿ ಮಹಮ್ಮದ್ ಸಲಾಂ ಇವರಿಗೆ, ದಿನಾಂಕ – 29.11.2025ರಂದು ನ್ಯಾಯಾಲಯದ ನ್ಯಾಯಾಧೀಶರಾದ ದೇವರಾಜ್ ವೈ.ಹೆಚ್ ರವರು 3 ವರ್ಷಗಳ ಸಾದಾ ಶಿಕ್ಷೆ ಮತ್ತು 10,000 ದಂಡ ಹಾಗೂ ದಂಡಪಾವತಿಸಲು ತಪ್ಪಿದ್ದಲ್ಲಿ ಆರು ತಿಂಗಳ ಕಾಲ ಹೆಚ್ಚುವರಿ ಶಿಕ್ಷೆ ನೀಡಿ ಆದೇಶಿಸಿದೆ.
ಸದ್ರಿ ಪ್ರಕರಣದಲ್ಲಿ ಪೊಲೀಸ್ ನಿರೀಕ್ಷಕರಾದ ಉಮೇಶ್ ಉಪ್ಪಳ್ಳಿಗೆರವರು ಚಾರ್ಜ್ ಶೀಟ್ ಸಲ್ಲಿಸಿದ್ದು, ಸಹಾಯಕ ಸರ್ಕಾರಿ ಅಭಿಯೋಜಕರು ಚೇತನಾದೇವಿ ವಾದ ಮಂಡಿಸಿರುತ್ತಾರೆ.





