ಆಸ್ಟ್ರೇಲಿಯಾದಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೇಯಸ್ ಅಯ್ಯರ್
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಪಂದ್ಯದ ವೇಳೆ ಅಲೆಕ್ಸ್ ಕ್ಯಾರಿ ಅವರನ್ನು ಔಟ್ ಮಾಡಲು ಬ್ಯಾಕ್ವರ್ಡ್ ಪಾಯಿಂಟ್ನಿಂದ ಹಿಂದಕ್ಕೆ ಓಡುತ್ತಾ ಅದ್ಭುತ ಕ್ಯಾಚ್ ಹಿಡಿದ ವೇಳೆ ಭಾರತ ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಗಾಯಗೊಂಡಿದ್ದು ಪಕ್ಕೆಲುಬಿನ ಗಾಯದಿಂದ ಬಳಲುತ್ತಿದ್ದ ಅವರನ್ನು ಆಂತರಿಕ ರಕ್ತಸ್ರಾವದಿಂದ ಸಿಡ್ನಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸದ್ಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಕಳೆದ ಮೂರು ದಿನಗಳಿಂದ ಶ್ರೇಯಸ್ ಐಸಿಯುನಲ್ಲಿದ್ದಾರೆ. ಎರಡರಿಂದ ಏಳು ದಿನಗಳವರೆಗೆ ಅವರನ್ನು ತೀವ್ರ ನಿಗಾ ಘಟಕದಲ್ಲಿಡಲಾಗುತ್ತದೆ’ ಎನ್ನಲಾಗಿದೆ.
‘ತಂಡದ ವೈದ್ಯರು ಮತ್ತು ಫಿಜಿಯೋಗಳು ಯಾವುದೇ ಅವಕಾಶಗಳನ್ನು ತೆಗೆದುಕೊಳ್ಳಲಿಲ್ಲ ಮತ್ತು ಡ್ರೆಸ್ಸಿಂಗ್ ರೂಂಗೆ ಹಿಂತಿರುಗಿದ ನಂತರ ಅವರ ಪ್ಯಾರಾಮೀಟರ್ಸ್ ಏರಿಳಿತದಿಂದಾಗಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರು. ಈಗ ಪರಿಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.



