ಕರಾವಳಿ

ಸಾಲ್ಮರ ಮೌಂಟನ್ ವ್ಯೂ ಅಸ್ವಾಲಿಹಾ ಕಾಲೇಜ್‌ನಲ್ಲಿ “ಪ್ರೇಯರ್ ಡೇ” ಕಾರ್ಯಕ್ರಮ*

ಪುತ್ತೂರು: ಅಗಲಿದ ಉಲಮಾ, ಉಮರಾ ನಾಯಕರ ಸ್ಮರಣಾರ್ಥವಾಗಿ “ಪ್ರೇಯರ್ ಡೇ” ಕಾರ್ಯಕ್ರಮ ಪವಿತ್ರ ಖತಮುಲ್ ಖುರ್‌ಆನ್ ಪಾರಾಯಣ, ತಹ್ಲೀಲ್ ಸಮರ್ಪಣೆ ಮತ್ತು ವಿಶೇಷ ಪ್ರಾರ್ಥನೆಗಳೊಂದಿಗೆ ಸಾಲ್ಮರ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಗಳ ಅಧೀನದ ಅಸ್ವಾಲಿಹಾ ವುಮೆನ್ಸ್ ಕಾಲೇಜ್ ನಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಪಡೀಲ್ ಮಾತನಾಡಿ, ಧರ್ಮ ಹಾಗೂ ಸಮಾಜಕ್ಕಾಗಿ ಅಮೂಲ್ಯ ಕೊಡುಗೆ ನೀಡಿದ ಅಗಲಿದ ನಾಯಕರನ್ನು ಸ್ಮರಿಸಿ, ಅವರಿಗಾಗಿ ಪ್ರಾರ್ಥನೆ ನಡೆಸುವುದು ನಮ್ಮ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಕಾಲೇಜ್‌ ನ ಸ್ಟೂಡೆಂಟ್ಸ್ ಕಮಿಟಿ ಸಂಘಟಿಸಿರುವ ಈ ಕಾರ್ಯಕ್ರಮವು ಅಭಿನಂದನೀಯ ಎಂದರು.


  ಪ್ರಾರ್ಥನೆಗೆ ನೇತೃತ್ವ ನೀಡಿದ ಉಸ್ತಾದ್ ಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ ಮಾತನಾಡಿ, ಪ್ರಾರ್ಥನೆಯು ಆತ್ಮವಿಶ್ವಾಸವನ್ನು ಹೆಚ್ಚಿಸಿ, ಒಳ್ಳೆಯ ಚಿಂತನೆಗಳನ್ನು ಬಲಪಡಿಸುವ ಶಕ್ತಿ ಹೊಂದಿದೆ ಎಂದು ಹೇಳಿದರು. ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯಾಲಯ ನಿರ್ವಾಹಕರಾದ ಯೂಸುಫ್ ಮತ್ತು ಹಮೀದ್ ಶುಭ ಕೋರಿದರು.



ಖತಮುಲ್ ಖುರ್‌ಆನ್: ಕಾರ್ಯಕ್ರಮದ ಮೊದಲು ಕಾಲೇಜ್ ನ ಉಪನ್ಯಾಸಕಿಯರ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ತಹ್ಲೀಲ್ ಮತ್ತು ಪವಿತ್ರ ಖತಮುಲ್ ಖುರ್‌ಆನ್ ಪಾರಾಯಣ ನೆರವೇರಿಸಿದರು.

Leave a Reply

Your email address will not be published. Required fields are marked *

error: Content is protected !!