ಕರಾವಳಿಕ್ರೈಂ

ತಡರಾತ್ರಿ ಮನೆಯೊಳಗೆ ನುಗ್ಗಿ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದು ಪರಾರಿ



ಬಂಟ್ವಾಳ: ಮನೆಯೊಂದಕ್ಕೆ ತಡರಾತ್ರಿ ನುಗ್ಗಿದ ಇಬ್ಬರು ಅಪರಿಚಿತರು ವ್ಯಕ್ತಿಯ ಕುತ್ತಿಗೆಯಲ್ಲಿದ್ದ ಸುಮಾರು 20 ಗ್ರಾಂ ತೂಕದ ₹2.60 ಲಕ್ಷ ಮೌಲ್ಯದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿರುವ ಘಟನೆ ಬಂಟ್ವಾಳ ತಾಲೂಕಿನ ಇಡ್ಕಿದುನಲ್ಲಿ ವರದಿಯಾಗಿದೆ.

ಇಡ್ಕಿದು ನಿವಾಸಿ ಕೆ. ಸೂರ್ಯನಾರಾಯಣ (79) ಅವರ ಮನೆಯಲ್ಲಿ ತಡರಾತ್ರಿ ನುಗ್ಗಿದ ಇಬ್ಬರು ಅಪರಿಚಿತರು ಅವರ ಕುತ್ತಿಗೆಯಲ್ಲಿದ್ದ ಸುಮಾರು 20 ಗ್ರಾಂ ತೂಕದ ₹2.60 ಲಕ್ಷ ಮೌಲ್ಯದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.

ಜುಲೈ 25ರಂದು ರಾತ್ರಿ ಸೂರ್ಯನಾರಾಯಣ ಅವರು ಮನೆಯ ಸದಸ್ಯರೊಂದಿಗೆ ಮಲಗಿದ್ದ ವೇಳೆ, ತಡರಾತ್ರಿ ಇಬ್ಬರು ಅಪರಿಚಿತರು ಮನೆಯೊಳಗೆ ಪ್ರವೇಶಿಸಿರುವುದು ಗಮನಕ್ಕೆ ಬಂದಿದೆ. ಅವರು ಎದ್ದು ನೋಡುತ್ತಿದ್ದಂತೆಯೇ ಆರೋಪಿಗಳು ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡು, ಮನೆಯ ಹಿಂಬಾಗಿಲಿನ ಮೂಲಕ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

 



ಈ ಕುರಿತು ಕೆ. ಸೂರ್ಯನಾರಾಯಣ ಅವರ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 163/2026 ದಾಖಲಿಸಲಾಗಿದ್ದು, ಕಲಂ 329(4), 115(2), 309(4) ಹಾಗೂ 3(5) ಬಿಎನ್‌ಎಸ್–2023ರಡಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!