ಕರಾವಳಿ

ಸಿಡಿಲು ಬಡಿದು ಕೂಲಿ ಕಾರ್ಮಿಕ ಮೃತ್ಯು

ಪುತ್ತೂರು: ಸಿಡಿಲಾಘಾತಕ್ಕೆ ಕೂಲಿ ಕಾರ್ಮಿಕರೋರ್ವರು ಬಲಿಯಾದ ಘಟನೆ ಶಾಂತಿಗೋಡು ಗ್ರಾಮದ ಆನಡ್ಕದಲ್ಲಿ ಅ.11ರ ಸಂಜೆ ನಡೆದಿದೆ.

ಆನಡ್ಕದ ನೆಕ್ಕರೆ ವಾಮನ ನಾಯ್ಕ(40ವ.)ಸಿಡಿಲು ಬಡಿದು ಮೃತಪಟ್ಟವರು. ಕೂಲಿ ಕಾರ್ಮಿಕರಾಗಿದ್ದ ವಾಮನ ಅವರು ಅ.11ರಂದು ಸಂಜೆ ಕೆಲಸ ಮುಗಿಸಿ ಬಂದು ಮನೆಯಂಗಳದ ಜಗಲಿಯಲ್ಲಿದ್ದ ವೇಳೆ ಸಿಡಿಲು ಬಡಿದು ಅಸ್ವಸ್ಥಗೊಂಡರು ಎನ್ನಲಾಗಿದೆ. ತಕ್ಷಣ ಅವರನ್ನು ಮನೆಯಲ್ಲಿದ್ದ ಸಹೋದರ, ಇತರರು ಪುತ್ತೂರು ಹಿತ ಆಸ್ಪತ್ರೆಗೆ ಕರೆ ತಂದರಾದರೂ ಆ ವೇಳೆಗಾಗಲೇ ವಾಮನ ಅವರು ಮೃತಪಟ್ಟಿದ್ದರು.

ಅವಿವಾಹಿತರಾಗಿದ್ದ ವಾಮನ ನಾಯ್ಕ ಅವರು ಇಬ್ಬರು ಸಹೋದರಿಯರು ಮತ್ತು ಮೂವರು ಸಹೋದರರನ್ನು ಅಗಲಿದ್ದಾರೆ.ವಾಮನ ಅವರ ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆ ಯಲ್ಲಿ ಮರಣೋತ್ತರ ಪರೀಕ್ಷೆಗೆ ತರಲಾಗಿತ್ತು.

ಸಿಡಿಲ ಆಘಾತಕ್ಕೆ ಬಲಿಯಾದ ಶಾಂತಿಗೋಡು ಗ್ರಾಮದ ನೆಕ್ಕರೆ ನಿವಾಸಿ ವಾಮನ ನಾಯ್ಕ ಅವರ ಅಂತಿಮ ದರ್ಶನ ಪಡೆದ ಶಾಸಕ ಅಶೋಕ್ ರೈ ಗಳು ಮೃತರ ಅಂತಿಮ ಸಂಸ್ಕಾರಕ್ಕೆ ಆರ್ಥಿಕ ನೆರವು ಹಾಗೂ ಮೃತ ದೇಹ ಸಾಗಿಸಲು ಅಂಬುಲೆನ್ಸ್ ವ್ಯವಸ್ಥೆ ಮಾಡುವ ಮೂಲಕ ಕುಟುಂಬಕ್ಕೆ ಸಾಂತ್ವನ ತಿಳಿಸಿದರು

Leave a Reply

Your email address will not be published. Required fields are marked *

error: Content is protected !!