ಗಾಂಜಾ ಸೇವನೆ ಮಾಡಿದ್ದ ಯುವಕ ಅಬಕಾರಿ ಉಪಾಧೀಕ್ಷಕರ ಬಲೆಗೆ
ಬಂಟ್ವಾಳ: ಬಂಟ್ವಾಳ ಅಬಕಾರಿ ಉಪಾಧೀಕ್ಷಕರ ತಂಡದವರು ಬಿಳಿಯೂರು ಗ್ರಾಮದಿಂದ ಎರಡು ಜನ ಯುವಕರನ್ನು ಗಾಂಜಾ ಸೇವನೆ ಬಗ್ಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ಮಾಡಿದಾಗ ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಅಬೂಬಕ್ಕರ್ ಸಿದ್ದೀಕ್ (26), ಎಂಬಾತ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.
ಆತನ ಮೇಲೆ ಗಾಂಜಾ ಸೇವನೆ ಪ್ರಕರಣ ದಾಖಲಿಸಿ ನೋಟಿಸ್ ನೀಡಿ ತನಿಖೆ ಕೈಗೊಳ್ಳಲಾಗಿದೆ.
ಮತ್ತೊಬ್ಬ ಯುವಕ ಗಾಂಜಾ ಸೇವನೆಯ ಬಗ್ಗೆ ದೃಡಪಟ್ಟಿರುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.