ಬ್ರಹ್ಮಾವರ: ಚೂರಿ ಇರಿತಕ್ಕೊಳಗಾದ ಯುವತಿ ಸಾವು, ಆರೋಪಿ ಯುವಕ ಆತ್ಮಹತ್ಯೆ
ಬ್ರಹ್ಮಾವರದ ಕೊಕ್ಕರ್ಣೆಯಲ್ಲಿ ಇರಿತಕ್ಕೆ ಒಳಗಾಗಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ರಕ್ಷಿತಾ (24) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ರಕ್ಷಿತಾ ಅವರಿಗೆ ಇರಿದು ಹತ್ಯೆಗೈದ ಕಾರ್ತಿಕ್ ಶವ ಕೂಡಾ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಶುಕ್ರವಾರ ಬೆಳಿಗ್ಗೆ ಸಂಭವಿಸಿದ್ದು, ರಕ್ಷಿತಾ ಅವರು ಮದುವೆ ಪ್ರಸ್ತಾವನೆಯನ್ನು ತಿರಸ್ಕರಿಸಿದ ಕಾರಣಕ್ಕೆ ಅವರ ನೆರೆಮನೆಯ ಕಾರ್ತಿಕ್ ಎಂಬಾತ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ. ಮೃತಳ ಕುಟುಂಬ ಈ ಸಂಬಂಧವನ್ನು ವಿರೋಧಿಸಿತ್ತು, ಕಾರ್ತಿಕ್, ರಕ್ಷಿತಾ ಕೆಲಸಕ್ಕೆ ಹೋಗುವಾಗ ತಡೆದು ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆ.
ಕೊಕ್ಕರ್ಣೆಯ ಪೂಜಾರಿಬೆಟ್ಟು ನಿವಾಸಿಯಾಗಿರುವ ರಕ್ಷಿತಾ ಅವರು ಗಂಭಿರವಾಗಿ ಗಾಯಗೊಂಡಿದ್ದರು. ಬಳಿಕ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಸಂಜೆ ವೇಳೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಆರೋಪಿ ಕಾರ್ತಿಕ್ ಶವ ಬಾವಿಯೊಂದರಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ರಕ್ಷಿತಾಗೆ ಇರಿದ ಬಳಿಕ ಕಾರ್ತಿಕ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.