ಕರಾವಳಿ

ಸುಳ್ಯ: ಈದ್ ಮಿಲಾದ್ ಪ್ರಯುಕ್ತ ಮರ್ಕಝ್ ಕೆ.ಎಸ್.ಒ ವತಿಯಿಂದ  ಸಿಹಿ ವಿತರಣೆ

ಸುಳ್ಯ: ಕೇರಳದ ಕಲ್ಲಿಕೋಟೆಯ ಮರ್ಕಝ್ ಕಾರಂದೂರಿನಲ್ಲಿ ಕಲಿಯುತ್ತಿರುವ ಕರ್ನಾಟಕ ವಿದ್ಯಾರ್ಥಿಗಳ ಒಕ್ಕೂಟವಾದ ಕೆ ಎಸ್ ಒ ಸಂಘಟನೆಯ ವತಿಯಿಂದ ಈದ್ ಮಿಲಾದ್ ಪ್ರಯುಕ್ತ ಸುಳ್ಯ ಪಟ್ಟಣದಲ್ಲಿ ಸಾರ್ವಜನಿಕರಿಗೆ ಸಿಹಿ ತಿಂಡಿ ವಿತರಿಸಲಾಯಿತು.

ಮಿಲಾದ್ ಕ್ಯಾಂಪೇನ್ “ಶಫೀಯುಲ್ ಉಮಮ್ 3.0” ಭಾಗವಾಗಿ ಆಯೋಜಿಸಲಾಗಿದ್ದ ಅತ್ತವದ್ದುದ್
“ಪ್ರೀತಿ ಹಂಚೋಣ” ಎಂಬ ಸಂದೇಶದೊಂದಿಗೆ ವಿವಿಧ ಸಮುದಾಯದ ಜನರು ಭಾಗವಹಿಸಿ ಈದ್ ಮಿಲಾದ್ ಹಬ್ಬದ ಸಂತೋಷವನ್ನು ಹಂಚಿಕೊಂಡರು. ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಕೆ ಎಸ್ ಒ ಉಪಾಧ್ಯಕ್ಷರಾದ ಹಾಫಿಲ್ ಸಿದ್ದೀಕ್, ಸದಸ್ಯರಾದ ಮುಂಜಿರ್, ಕರೀಂ, ರಾಶಿದ್ , ಸಈದ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಮೂಲಕ ಸಮಾಜದಲ್ಲಿ ಸಾಮರಸ್ಯವನ್ನು ಬೆಳೆಸುವುದು ಹಾಗೂ ಪ್ರೀತಿ ಹಂಚುವ ಉದ್ದೇಶ ನಮ್ಮದಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!