‘ಪಿಲಿ ರಾಧಣ್ಣ’ ಇನ್ನಿಲ್ಲ
ಪುತ್ತೂರು: ಹತ್ತೂರಿನಲ್ಲಿ ಪಿಲಿ ರಾಧಣ್ಣ ಎಂದೇ ಹೆಸರು ಪಡೆದಿದ್ದ ರಾಧಾಕೃಷ್ಣ ಶೆಟ್ಟಿಯವರು ನಿಧನ ಹೊಂದಿದ್ದಾರೆ.

ಕೆಮ್ಮಾಯಿ ನಿವಾಸಿ ರಾಧಾಕೃಷ್ಣ ಶೆಟ್ಟಿ(59ವ) ಅವರನ್ನು ಅನಾರೋಗ್ಯದಿಂದಾಗಿ ಸೆ.5 ರಂದು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ಸೆ.6 ರಂದು ನಸುಕಿನ ಜಾವ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.