ಪ್ರತಿಭಟನೆಯಲ್ಲಿ ಪುತ್ತೂರಿನವರು 2 ಜನ ಮಾತ್ರ ಇದ್ದರು ಎಂದ ಶಾಸಕ ಅಶೋಕ್ ರೈ
ಪುತ್ತೂರು: ಜು.7ರಂದು ಪುತ್ತೂರು ದರ್ಬೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಪ್ರತಿಭಟನೆ ನಡೆದಿದ್ದು ಅದರಲ್ಲಿ ಪುತ್ತೂರಿನವರು ಕೇವಲ ಎರಡು ಮಂದಿ ಮಾತ್ರ ಇದ್ದು ಉಳಿದವರು ಸುಳ್ಯದಿಂದ ಎಲ್ಲ ಬಂದು ಒಟ್ಟು ಮೂವತ್ತು ಜನ ಇದ್ದರು. ಅದಕ್ಕೆ ಪುತ್ತೂರಿನ ಯುವಕರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

ಆ ಪ್ರತಿಭಟನೆಯಲ್ಲಿ ಶಾಸಕ ಅಶೋಕ್ ರೈ ಅವರನ್ನು ನಿಂದಿಸಿ ಅಜಿತ್ ಎಂಬವರು ಭಾಷಣ ಮಾಡಿದ ಆರೋಪ ವ್ಯಕ್ತವಾಗಿದ್ದು ಆ ವಿಚಾರದ ಬಗ್ಗೆ ಶಾಸಕರು ಪ್ರತಿಕ್ರಿಯೆ ನೀಡಿ,
ಒಬ್ಬರ ಬಗ್ಗೆ ಏಕವಚನದಲ್ಲಿ ಮಾತನಾಡುವುದು ಸಂಸ್ಕೃತಿಯಲ್ಲ, ಯಾವನೋ ಒಬ್ಬ ಎಲ್ಲಿಂದಲೋ ಬಂದು ಮಾತನಾಡಿದ್ದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ, ಏಕವಚನದಲ್ಲಿ ಮಾತನಾಡಿ ಯಾರೂ ದೊಡ್ಡ ವ್ಯಕ್ತಿ ಆಗುವುದಿಲ್ಲ, ಅವರು ಸ್ವಲ್ಪ ಹೊತ್ತು ಪುತ್ತೂರಲ್ಲಿ ಇರಬೇಕಿತ್ತು, ಬುದ್ದಿ ಕಲಿಸುವ ಕೆಲಸ ಮಾಡುತ್ತಿದ್ದೆವು ಎಂದು ತಿಳಿಸಿದ್ದಾರೆ.
ನಾವು ಯಾರಿಗೂ ವಿರೋಧ ಇಲ್ಲ, ಯಾರು ಅನವಶ್ಯಕವಾಗಿ ಇಂತಹ ವಿಚಾರ ಸೃಷ್ಟಿ ಮಾಡ್ತಾರೆ ಅವರನ್ನು ಎದುರಿಸಲು ನಮಗೆ ಗೊತ್ತಿದೆ ಎಂದರು.