ಮಧುರಾ ಎಜುಕೇಶನ್ ಟ್ರಸ್ಟ್ ಆಡಳಿತ ಕಚೇರಿ ಶುಭಾರಂಭ
ಪುತ್ತೂರು: ಮಧುರಾ ಎಜುಕೇಶನ್ ಟ್ರಸ್ಟ್ ಇದರ ಆಡಳಿತ ವಿಭಾಗದ ಕಚೇರಿಯು ಮೇನಾಲ ಮಧುರಾ ಕ್ಯಾಂಪಸ್ ನಲ್ಲಿ ಜೂ.5ರಂದು ಶುಭಾರಂಭಗೊಂಡಿತು.

ನೂತನ ಕಚೇರಿಯನ್ನು ಮಧುರಾ ಎಜುಕೇಷನಲ್ ಟ್ರಸ್ಟ್ ನ ಟ್ರಸ್ಟಿ ಖತಿಜಮ್ಮ ಮಧುರಾ ಉದ್ಘಾಟಿಸಿದರು .
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಹನೀಫ್ ಮಧುರಾ, ಪ್ರಧಾನ ಕಾರ್ಯದರ್ಶಿ ಮಿಶ್ರಿಯ ಮಧುರಾ, ಮಧುರಾ ಇಂಟರ್ನ್ಯಾಷನಲ್ ಸ್ಕೂಲ್ ಇದರ ಸಲಹಾ ಸಮಿತಿಯ ಮುಖ್ಯಸ್ಥ ಅಬ್ದುಲ್ ರಹಿಮಾನ್ ಹಾಜಿ ಮೆನಾಲ, ಆಡಳಿತ ಅಧಿಕಾರಿ ಅಬ್ದುಲ್ ರಹಿಮಾನ್, ಮ್ಯಾನೇಜರ್ ರಹಿಯಾನ, ಅಡ್ಮಿನ್ ಆಫೀಸರ್ ಅಬ್ದುಲ್ ನಾಸಿರ್ ಹಾಗೂ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.